ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಕಾನ್‌ಪುರ್ ರ್ಯಾಲಿ ಅಕ್ಟೋಬರ್ 20ಕ್ಕೆ ಮುಂದೂಡಿಕೆ

Mainashree
Updated On : 27 Sept 2013, 4:40 am

ಕಾನ್‌ಪುರ್: ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕಾನ್‌ಪುರ್‌ನಲ್ಲಿ ಕೈಗೊಳ್ಳಬೇಕಿದ್ದ ರ್ಯಾಲಿಯನ್ನು ಅಕ್ಟೋಬರ್ 15ರಿಂದ ಅಕ್ಟೋಬರ್ 20ಕ್ಕೆ ಮುಂದೂಡಲಾಗಿದೆ.

ಅಕ್ಟೋಬರ್ 13ರಂದು ದಸರಾ ಹಾಗೂ 14ರಂದು ಬಕ್ರೀದ್ ಎರಡು ಧರ್ಮಗಳ ಹಬ್ಬ ನಡೆಯಲಿದೆ. ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿ 15 ಮತ್ತು 16ರಂದು ಪೂರ್ಣ ಭದ್ರತೆ ಕಲ್ಪಿಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ರ್ಯಾಲಿಯನ್ನು 20ಕ್ಕೆ ಮುಂದೂಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ಅವರು ಅಕ್ಟೋಬರ್ 3ರಂದು ಕಾನ್‌ಪುರಕ್ಕೆ ಭೇಟಿ ನೀಡಲಿದ್ದು, ರ್ಯಾಲಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

3ಲಕ್ಷದ ಜನರು ರ್ಯಾಲಿಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement