ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಐಎಎಸ್ ಅಧಿಕಾರಿ ದುರ್ಗಾಶಕ್ತಿ ಕಾನ್‌ಪುರ್‌ಗೆ ವರ್ಗಾವಣೆ

Mainashree
Updated On : 28 Sept 2013, 3:22 am

ಲಖನೌ: ಉತ್ತರ ಪ್ರದೇಶದಲ್ಲಿ ಮರಳು ಮಾಫಿಯಾ ವಿರುದ್ಧ ಬಿಗಿ ನಿಲುವು ತಳೆದಿದ್ದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರನ್ನು ಅಖಿಲೇಶ್ ಸರ್ಕಾರ ಕಾನ್‌ಪುರ್(ಗ್ರಾಮಾಂತರ) ಪ್ರದೇಶಕ್ಕೆ ಜಂಟಿ ಮ್ಯಾಜಿಸ್ಟ್ರೇಟ್‌ರನ್ನಾಗಿ ವರ್ಗಾವಣೆ ಮಾಡಿದೆ.

ಮರಳು ಮಾಫಿಯಾ ಮತ್ತು ಭೂ ಒತ್ತುವರಿಯನ್ನು ಮಟ್ಟ ಹಾಕಿದ್ದಕ್ಕಾಗಿ ದುರ್ಗಾಶಕ್ತಿಯನ್ನು ಅಮಾನತು ಮಾಡಲಾಗಿತ್ತು. ತದ ನಂತರ ದುರ್ಗಾಶಕ್ತಿ ಅವರ ಅಮಾನತನ್ನು ಅಖಿಲೇಶ್ ಯಾದವ್ ಸರ್ಕಾರ ರದ್ದುಪಡಿಸಿತು. ಇದರ ಬೆನ್ನಲ್ಲೇ ಸರ್ಕಾರ ರಾತ್ರೋರಾತ್ರಿ ಅವರನ್ನು ಜಂಟಿ ಮ್ಯಾಜಿಸ್ಟ್ರೇಟ್‌ರನ್ನಾಗಿ ಕಾನ್‌ಪುರ್‌ನ ಗ್ರಾಮಾಂತರ ಪ್ರದೇಶಕ್ಕೆ ವರ್ಗಾಯಿಸಲಾಗಿದೆ.

ಜುಲೈ 27ರಂದು ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರನ್ನು ಅಖಿಲೇಶ್ ಸರ್ಕಾರ ಅಮಾನತುಗೊಳಿಸಿತ್ತು.

ಗೌತಮಬುದ್ಧ ನಗರದ ಉಪ ವಿಭಾಗೀಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದುರ್ಗಾಶಕ್ತಿ ಅವರು ಹಿಂಡನ್ ಮತ್ತು ಯಮುನಾ ನದಿ ತಟದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಿದ್ದರು. ದುರ್ಗಾ ಅವರ ಕ್ರಮದ ವಿರುದ್ಧ ತಿರುಗಿಬಿದ್ದ ಸಮಾಜವಾದಿ ಪಕ್ಷದವರು, ಮಸೀದಿಯೊಂದರ ಅಕ್ರಮ ಗೋಡೆಯನ್ನು ಒಡೆದು ಕೋಮುಸಾಮರಸ್ಯಕ್ಕೆ ಧಕ್ಕೆ ತಂದ ಆರೋಪವನ್ನು ಅವರ ಮೇಲೆ ಹೊರಿಸಿ ಅಮಾನತು ಮಾಡಲಾಗಿತ್ತು. ಇದರ ವಿರುದ್ಧ ದುರ್ಗಾ ಅವರು ಹೋರಾಟ ನಡೆಸಿ ಮತ್ತೆ ಹುದ್ದೆಗೆ ವಾಪಾಸ್ಸಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement