ಮುಝಾಫರ್‌ನಗರ ಗಲಭೆ: ನಿರಾಶ್ರಿತರಿಗೆ ಸರ್ಕಾರಿ ನೌಕರಿ
ಲಖನೌ: ಮುಜಾಫರ್‌ನಗರ ಹಿಂಸಾಚಾರಕ್ಕೆ ಬಲಿಯಾದ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಲಾಗುವುದು ಎಂದು ಉತ್ತರಪ್ರದೇಶದ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಲಾಗುವುದು ಎಂದು ಸರ್ಕಾರಿ ಅಧಿಕಾರಿ ಹೇಳಿದ್ದಾರೆ.
ಗಲಭೆಯಲ್ಲಿ 62 ಜನರು ಸಾವನ್ನಪ್ಪಿದ್ದು, ಐವರ ಗುರುತು ಸಿಗಲಿಲ್ಲ. ಆದರೆ ಸಾನ್ನಪ್ಪಿದ್ದವರ ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಡಲಾಗುವುದು. ಒಂದು ವೇಳೆ ಕುಟುಂಬದಲ್ಲಿ ಚಿಕ್ಕವರಿದ್ದರೇ, ಅಂತಹವರಿಗೆ 18 ವರ್ಷ ತುಂಬಿದ ಮೇಲೆ ನೌಕರಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಈಗಾಗಲೇ ಪ್ರಸ್ತಾವನೆ ಹೊರಡಿಸಲಾಗಿದ್ದು, 7 ಜನರಿಗೆ ಗ್ರೂಪ್ ಸಿ ಹುದ್ದೆ ನೀಡಲು ನಿರ್ಧರಿಸಲಾಗಿದೆ. ಇನ್ನೂ 47 ಜನರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಡಿ ಹುದ್ದೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 7ರಂದು ಮುಜಾಫರ್‌ನಗರದಲ್ಲಿ ನಡೆದ ಕೋಮು ಗಲಭೆಗೆ 62 ಮಂದಿ ಬಲಿಯಾಗಿದ್ದರು.