ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸುಪ್ರೀಂ ಆದೇಶ ಜಾರಿಗೆ ತರುತ್ತೇವೆ: ಚುನಾವಣೆ ಆಯೋಗ

ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಜಾರಿಗೆ ಬರಬೇಕು ಎಂದು ಸುಪ್ರೀಂಕೋರ್ಟ್ ಹೊರಡಿಸಿದ ಆದೇಶವನ್ನು ಕಾರ್ಯರೂಪಕ್ಕೆ...

Mainashree
Updated On : 28 Sept 2013, 5:07 am

ನವದೆಹಲಿ: ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಜಾರಿಗೆ ಬರಬೇಕು ಎಂದು ಸುಪ್ರೀಂಕೋರ್ಟ್ ಹೊರಡಿಸಿದ ಆದೇಶವನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಚುನಾವಣೆ ಆಯೋಗ ಶನಿವಾರ ಹೇಳಿದೆ.

ನಿನ್ನೆ ಸುಪ್ರೀಂ ಕೋರ್ಟ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅರಭ್ಯರ್ಥಿಗಳು ಮತದಾರಿಗೆ ಇಷ್ಟವಾಗದೇ ಇದ್ದಲ್ಲಿ ಅವರನ್ನು ತಿರಸ್ಕರಿಸುವ ಹಕ್ಕನ್ನು ನೀಡಿ ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಈ ಹಿನ್ನಲ್ಲೆಯಲ್ಲಿ ಇಂದು ಚುನಾವಣಾ ಆಯೋಗ, ಸುಪ್ರೀಂ ಆದೇಶವನ್ನು ಜಾರಿಗೆ ತರಲಿದ್ದು, ಮತಚಲಾಯಿಸುವ ಯಂತ್ರದಲ್ಲಿ ತಿರಸ್ಕರಿಸುವ ಬಟನ್‌ನನ್ನು ಅಳವಡಿಸಲಾಗುವುದು ಎಂದು ಹೇಳಿದೆ.

ಇನ್ನು ಮುಂದೆ ಮತದಾರರು ನೇರವಾಗಿ ಅಭ್ಯರ್ಥಿಗಳನ್ನು ತಿರಸ್ಕರಿಸಬಹುದು. ಇದಕ್ಕೆ ಗುಪ್ತ ಮತದಾನದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.

ಜನರಿಗೆ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನು ಆರಿಸುವ ಹಕ್ಕಿರುವಂತೆಯೇ, ಸೂಕ್ತ ಅಭ್ಯರ್ಥಿಗಳಿಲ್ಲದ ಕ್ಷೇತ್ರದಲ್ಲಿ ಅವರನ್ನು ತಿರಸ್ಕರಿಸುವ ಹಕ್ಕೂ ಇರಬೇಕು. ಈ ಹಿನ್ನಲೆಯಲ್ಲಿ ಬ್ಯಾಲೆಟ್ ಪೇಪರ್ ಮತ್ತು ಇವಿಎಂಗಳಲ್ಲಿ 'ಮೇಲಿನ ಯಾರೂ ಬೇಡ' ಎಂಬ ಗುಂಡಿಯನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಮುಂಬರುವ ಪಂಚ ರಾಜ್ಯಗಳ ಚುನಾವಣೆ ಅಥವಾ 2014ರ ಲೋಕಸಭೆ ಚುನಾವಣೆ ಹೊತ್ತಿಗೆ ಈ ನಿಯಮ ಜಾರಿಗೆ ಬರಲಿದೆ ಎಂದು ಆಯೋಗ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement