ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಆಸೀಸ್ ಸರಣಿಗೆ ಇಂಡಿಯಾ ತಂಡ ಪ್ರಕಟ: ಯುವಿ ಕಮ್‌ಬ್ಯಾಕ್

ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟಗೊಂಡಿದ್ದು,..

Lingaraj Badiger
Updated On : 30 Sept 2013, 2:24 am

ಚೆನ್ನೈ: ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟಗೊಂಡಿದ್ದು, 15 ಸದಸ್ಯರ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಸ್ಥಾನ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಯುವರಾಜ್ ಗಮನ ಸೆಳೆಯುವ ಪ್ರದರ್ಶನ್ ನೀಡಿದ್ದರು. ಅಲ್ಲದೆ ಜಹೀರ್ ಖಾನ್ ಜೊತೆ ಫ್ರಾನ್ಸ್‌ನಲ್ಲಿ ನಡೆಸಿದ ಕಠಿಣ ಅಭ್ಯಾಸದ ಫಲವಾಗಿ ಯುವಿ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 10ರಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭಗೊಳ್ಳಲಿದೆ.

ಇಂದು ಚೆನ್ನೈನಲ್ಲಿ ನಡೆದ ಬಿಸಿಸಿಐ ಆಯ್ಕೆ ಮಂಡಳಿ ಸಭೆಯಲ್ಲಿ, ಯುವರಾಜ್ ಸಿಂಗ್ ಹಾಗೂ ಕರ್ನಾಟಕದ ವೇಗದ ಬೌಲರ್ ಆರ್.ವಿನಯ್ ಕುಮಾರ್ ಸೇರಿದಂತೆ 15 ಸದಸ್ಯರ ತಂಡವನ್ನು ಪ್ರಕಟಿಸಲಾಯಿತು.

ಆಸೀಸ್ ಸರಣಿಗೆ ಆಯ್ಕೆಯಾದ ಟೀಂ ಇಂಡಿಯಾ
ಎಂ.ಎಸ್.ಧೋನಿ (ನಾಯಕ)
ರೋಹಿತ್ ಶರ್ಮಾ
ಶಿಖರ್ ಧವನ್
ವಿರಾಟ್ ಕೊಹ್ಲಿ
ಯುವರಾಜ್ ಸಿಂಗ್
ಸುರೇಶ್ ರೈನಾ
ರವೀಂದ್ರ ಜಡೆಜಾ
ಆರ್.ಅಶ್ವಿನ್
ಬಿ.ಕುಮಾರ್
ಇಶಾಂತ್ ಶರ್ಮಾ
ವಿನಯ್ ಕುಮಾರ್
ಅಮಿತ್ ಮಿಶ್ರಾ
ಅಂಬತಿ ರಾಯುಡು
ಮೊಹಮ್ಮದ್ ಶಮಿ
ಜಯದೇವ್ ಉನದ್ಕತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement