ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜೈಲಿನಲ್ಲೂ ಝಡ್‌ಪ್ಲಸ್ ಭದ್ರತೆ ಬೇಕೆಂದ ಲಾಲು

900 ಕೋಟಿ ರುಪಾಯಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು..

Lingaraj Badiger
Updated On : 1 Oct 2013, 1:27 am

ರಾಂಚಿ: 900 ಕೋಟಿ ರುಪಾಯಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರು, ತಮಗೆ ಜೈಲಿನಲ್ಲೂ ಝಡ್‌ಪ್ಲಸ್ ಭದ್ರತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಇದಕ್ಕೆ ಒಪ್ಪದ ರಾಂಚಿ ಸಿಬಿಐ ವಿಶೇಷ ಕೋರ್ಟ್, ಲಾಲು ಮನವಿಯನ್ನು ತಿರಸ್ಕರಿಸಿದೆ.

ಮೇವು ಹಗರಣದಲ್ಲಿ ದೋಷಿ ಎಂದು ತೀರ್ಪು ಪ್ರಕಟವಾಗುತ್ತಿದ್ದಂತೆ, ಲಾಲು ಜೈಲಿನಲ್ಲೂ ಝಡ್‌ಪ್ಲಸ್ ಸೆಕ್ಯೂರಿಟಿ ಪಡೆಯಲು ಕೋರ್ಟ್ ಅನುಮತಿ ಕೇಳಿದರು. ಆದರೆ ಕೋರ್ಟ್ ಇದಕ್ಕೆ ನಿರಾಕರಿಸಿದೆ ಎಂದು ಜೈಲು ಅಧಿಕಾರಿ ಧರ್ಮೇಂದ್ರ ಪಾಂಡೆ ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ ಝಡ್‌ಪ್ಲಸ್ ಭದ್ರತೆ ಹೊಂದಿದ್ದ ಬಿಹಾರ ಮಾಜಿ ಸಿಎಂ, ಮಾಜಿ ರೇಲ್ವೆ ಸಚಿವ ಲಾಲು, ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಯ ಯೋಧರ ರಕ್ಷಣೆಯಲ್ಲಿದ್ದರು.

17 ವರ್ಷಗಳಷ್ಟು ಹಳೆಯದಾದ ಮೇವು ಹಗರಣದಲ್ಲಿ ಬಿಹಾರ ಇಬ್ಬರು ಮಾಜಿ ಸಿಎಂಗಳು ಹಾಗೂ ನಾಲ್ವರು ಐಎಎಸ್ ಅಧಿಕಾರಿಗಳು ಸೇರಿದಂತೆ 43 ಮಂದಿ ತಪ್ಪಿತಸ್ಥರು ಎಂದು ಸಿಬಿಐನ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.  ಅವರಿಗೆ ಅ.3ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದೆಂದು ಸಿಬಿಐ ವಿಶೇಷ ಕೋರ್ಟ್‌ನ ನ್ಯಾಯಾಧೀಶ ಪ್ರವಾಸ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಇದು ಪ್ರಮುಖ ತೀರ್ಪು ಆಗಿದೆ.

1996ರಲ್ಲಿ ಹಗರಣ  ಬೆಳಕಿಗೆ ಬಂದಾಗ ಲಾಲು ಪ್ರಸಾದ್ ಯಾದವ್ ಬಿಹಾರ ಮುಖ್ಯಮಂತ್ರಿಯಾಗಿದ್ದರು. 1997ರಲ್ಲಿ ರಾಜಿನಾಮೆ ನೀಡಿದ ಬಳಿಕ ತಮ್ಮ ಪತ್ನಿ ರಾಬ್ಡಿ ದೇವಿ ಅವರನ್ನೇ ಸಿಎಂ ಸ್ಥಾನಕ್ಕೆ ನೇಮಿಸಿ, ಜೈಲಿನಿಂದಲೇ ಅಧಿಕಾರ ನಿರ್ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement