ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿವೃತ್ತ ಸೇನಾ ಮಖ್ಯಸ್ಥ ವಿ.ಕೆ ಸಿಂಗ್‌ಗೆ ಸುಪ್ರೀಂ ನೋಟೀಸ್

Mainashree
Updated On : 1 Oct 2013, 3:24 am

ನವದೆಹಲಿ: ವಯೋವುತಿ ವಿವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟೀಸ್ ಜಾರಿ ಮಾಡಿದೆ.

ಕಳೆದವಾರ ಆಂಗ್ಲ ಮಾದ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಸೋಮವಾರ ಸಿಂಗ್ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಸಿಂಗ್ ಅವರಿಗೆ ನೋಟೀಸ್ ನೀಡಿದೆ.

ಅತ್ಯಾಚಾರಿಯೊಬ್ಬ ನೀಡಿದ ದಾಖಲೆಯನ್ನು ಆಧರಿಸಿ ನ್ಯಾಯಾಲಯ ಆತನನ್ನು ಬಾಲಪರಾಧಿ ಎಂದು ಆತನ ವಯಸ್ಸನ್ನು ತೀರ್ಮಾನಿಸುತ್ತದೆ. ಆದರೆ ನಾನು ನೀಡಿದ ದಾಖಲೆಗಳನ್ನು ಹಲವು ಬಾರಿ ಪರೀಶೀಲಿಸಿದರು, ಇನ್ನೂ ವಯೋವುತಿ ತೀರ್ಮಾನ ಕೈಗೊಳ್ಳುವುದರಲ್ಲಿ ಸುಪ್ರೀಂ ಕೋರ್ಟ್ ವಿಫಲವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement