ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪೆರೋಲ್ ಮೇಲೆ ಸಂಜಯ್ ದತ್ ಬಿಡುಗಡೆ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಂಜಯ್ ದತ್ ಗೆ 14 ದಿನಗಳ ಕಾಲ ಪೆರೋಲ್ ನೀಡಲಾಗಿದ್ದು,

Lingaraj Badiger
Updated On : 1 Oct 2013, 1:58 am

ಮುಂಬೈ: ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಜೈಲು ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ 14 ದಿನಗಳ ಕಾಲ ಪೆರೋಲ್ ನೀಡಲಾಗಿದ್ದು, ಮಂಗಳವಾರ ಜೈಲಿನಿಂದ ಸಂಜು ಬಾಬಾ ಬಿಡುಗಡೆಯಾಗಿದ್ದಾರೆ.

ವೈದ್ಯಕೀಯ ಚಿಕಿತ್ಸೆ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಸಂಜಯ್ ದತ್‌ಗೆ ಪೆರೋಲ್ ನೀಡಿದ್ದು, ಇಂದು ಪುಣೆಯ ಯರವಾಡ ಜೈಲಿನಿಂದ ಹೊರ ಬಂದಿದ್ದಾರೆ.

ತಮ್ಮ ಗಾಯಗೊಂಡಿರುವ ಕಾಲಿಗೆ ಚಿಕಿತ್ಸೆ ಪಡೆದುಕೊಳ್ಳಲು 30 ದಿನ ಪೆರೋಲ್ ನೀಡುವಂತೆ ಸಂಜಯ್ ದತ್ ಮನವಿ ಮಾಡಿದ್ದರು. ಆದರೆ ಜೈಲು ಅಧಿಕಾರಿಗಳು ಸಂಜಯ್ ದತ್ ಮನವಿ ತಿರಸ್ಕರಿಸಿ 14 ದಿನಗಳವರೆಗೆ ಪೆರೋಲ್ ಮಂಜೂರು ಮಾಡಿದ್ದಾರೆ.

ಪೆರೋಲ್ ಅವಧಿ ಮುಗಿದ ತಕ್ಷಣ ಜೈಲಿಗೆ ವಾಪಸಾಗುವೆ: ಸಂಜಯ್ ದತ್
ಯರವಾಡ ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಸಂಜಯ್ ದತ್, ಕೈದಿಗಳಿಗೆ ನೀಡಲಾಗುವ ಪೆರೋಲ್ ಮೇಲೆ ತಾವು ಜೈಲಿನಿಂದ ಹೊರ ಬಂದಿದ್ದು, ಪೆರೋಲ್ ಅವಧಿ ಮುಗಿದ ತಕ್ಷಣ ಜೈಲಿಗೆ ವಾಪಸಾಗಿ ಕಾನೂನು ಮತ್ತು ನ್ಯಾಯಾಲಯದ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ.

ತಾವು 14 ದಿನಗಳಿಗೆ ಮಾತ್ರ ಪೆರೋಲ್ ಪಡೆದಿದ್ದು, ಈ ಸಮಯದಲ್ಲಿ ಕುಟುಂಬದವರೊಂದಿಗೆ ಕಾಲ ಕಳೆಯುವುದಾಗಿ ತಿಳಿಸಿದ್ದಾರೆ.

1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದ ವೇಳೆ ಅಕ್ರಮವಾಗಿ ತನ್ನ ಬಳಿ ಶಸ್ತ್ರಾಸ್ತ್ರಗಳನ್ನು ಇರಿಸಿಕೊಂಡಿದ್ದಕ್ಕಾಗಿ ಕಳೆದ ಮಾರ್ಚ್‌ನಲ್ಲಿ ಸಂಜಯ್ ದತ್‌ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement