ಜಯಲಲಿತಾ ಖುದ್ದು ಹಾಜರಾತಿಗೆ ವಿನಾಯಿತಿ
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಖುದ್ದು ಹಾಜರಾತಿಗೆ ಬೆಂಗಳೂರು ವಿಶೇಷ ನ್ಯಾಯಾಲಯ ಗುರುವಾರ ವಿನಾಯಿತಿ ನೀಡಿದೆ.
ತಾಂತ್ರಿಕ, ಭದ್ರತೆ ದೃಷ್ಟಿಯಿಂದಾಗಿ ಜಯಲಲಿತಾಗೆ ಖುದ್ದು ಹಾಜರಾತಿಗೆ ವಿನಾಯಿತಿ ನೀಡಿದ್ದು, ಇನ್ನುಳಿದ ಮೂವರಿಗೆ ಏ. 5ರಂದು ಖುದ್ದು ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಪರಪ್ಪನ ಅಗ್ರಹಾರ ಜೈಲಿನ ವಿಶೇಷ ನ್ಯಾಯಾಲಯ, ಜಯಲಲಿತಾ ಸೇರಿದಂತೆ ಶಶಿಕಲಾ, ಸುಧಾಕರ್ ಹಾಗೂ ಇಳವರಸೈಗೆ ಏಪ್ರಿಲ್ 5 ರಂದು ಕೋರ್ಟ್ಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿತ್ತು.