ಟಿ20 ನಾಯಕ ಸ್ಥಾನಕ್ಕೆ ಹಫೀಜ್ ರಾಜಿನಾಮೆ
ಲಾಹೋರ್: ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಂದ ಪಾಕಿಸ್ತಾನ ಹೊರ ಬಿದ್ದಿದ್ದು, ಪಾಕಿಸ್ತಾನದ ಸೋಲಿಗೆ ನೈತಿಕ ಹೊಣೆ ಹೊತ್ತು ಟ್ವಿ20 ಫಾರ್ಮೆಟ್ನ ನಾಯಕ ಮಹಮದ್ ಹಫೀಜ್ ಗುರುವಾರ ರಾಜಿನಾಮೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ತಂಡದ ಸಾಂಘಿಕ ಪ್ರದರ್ಶನದ ವೈಪಲತ್ಯೆ ಹಾಗೂ ತಂಡವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಟಿ20 ವಿಶ್ವಕಪ್ನ ಸೆಮಿಫೈನಲ್ಗೂ ತಂಡವನ್ನು ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಸೂಪರ್ 10 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 84 ರನ್ಗಳಿಗೆ ಪಾಕ್ ಪತನಗೊಂಡು ಹೀನಾಯ ಸೋಲು ಕಂಡಿತ್ತು.