ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಹತ್ಯೆಗೆ ವಿಫಲ ಯತ್ನ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ಹತ್ಯೆಗೆ ಉಗ್ರರು ವಿಫಲ..

Lingaraj Badiger
Updated On : 3 Apr 2014, 11:47 am

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ಹತ್ಯೆಗೆ ಉಗ್ರರು ವಿಫಲ ಯತ್ನ ನಡೆಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮುಷರಫ್ ತೆರಳುತ್ತಿದ್ದ ವಾಹನದ ಮೇಲೆ ಉಗ್ರರು ಬಾಂಬ್ ದಾಳಿ ಮಾಡಿದ್ದು, ಸ್ವಲ್ಪದರಲ್ಲೇ ಸೇನಾ ಆಡಳಿತಗಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಷರಫ್ ಅವರು ತಾವು ಚಿಕಿತ್ಸೆ ಪಡೆಯುತ್ತಿದ್ದ ಸೇನಾ ಆಸ್ಪತ್ರೆಯಿಂದ ತಮ್ಮ ಫಾರ್ಮ್‌ಹೌಸ್‌ಗೆ ಮರಳುತ್ತಿದ್ದ ವೇಳೆ ಉಗ್ರರು ಬಾಂಬ್ ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಆದರೆ ಈವರೆಗೂ ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ.

ಮುಷರಫ್ ತೆರಳುತ್ತಿದ್ದ ಮಾರ್ಗ ಮಧ್ಯೆ ಇದ್ದ ಬ್ರಿಡ್ಜ್‌ವೊಂದರ ಬಳಿ ಇದ್ದ ಪೈಪ್‌ಲೈನ್‌ನಲ್ಲಿ ಸುಮಾರು ನಾಲ್ಕು ಕೆಜೆಯಷ್ಟು ಸ್ಫೋಟಕವನ್ನು ತುಂಬಿಸಿ ಸ್ಫೋಟಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಲಿಯಾಖತ್ ನಿಯಾಝ್ ಅವರು ತಿಳಿಸಿದ್ದಾರೆ.

ಮುಷರಫ್ ಆಗಮಿಸುವ ಕೆಲವೇ ನಿಮಿಷಗಳ ಮುನ್ನ ಈ ಸ್ಫೋಟ ಸಂಭವಿಸಿದ್ದು, ಘಟನೆಯ ನಂತರ ಮುಷರಫ್ ಅವರು ಬೇರೆ ಮಾರ್ಗದ ಮೂಲಕ ಫಾರ್ಮ್‌ಹೌಸ್‌ಗೆ ತೆರಳಿದ್ದಾರೆ ಎಂದು ನಿಯಾಝ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement