ಮುಂಬೈ ಗ್ಯಾಂಗ್ ರೇಪ್: ಮೂವರಿಗೆ ಮರಣ ದಂಡನೆ?
ಮುಂಬಯಿ: ಕಳೆದ ವರ್ಷ ಇಲ್ಲಿನ ಶಕ್ತಿ ಮಿಲ್ ಕಾಂಪೌಂಡ್‌ನಲ್ಲಿ ಛಾಯಾಚಿತ್ರ ಪತ್ರಕರ್ತೆಯ ಮೇಲೆ ಗ್ಯಾಂಗ್ ರೇಪ್ ಎಸಗಿದ ನಾಲ್ವರಲ್ಲಿ ಮೂವರು ಲೈಂಗಿಕ ಅಪರಾಧ ಎಸಗಿದವರಾಗಿದ್ದಾರೆ ಎಂದು ಇಲ್ಲಿನ ಸೆಶನ್ಸ್ ನ್ಯಾಯಾಲಯಕ್ಕೆ ಮನವರಿಕೆಯಾಗಿದ್ದು, ಇವರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಅಂತಿಮ ವಾದ ನಡೆದಿದ್ದು, ನ್ಯಾಯಾಲಯವು ನಾಲ್ವರಲ್ಲಿ ಮೂವರು ಆರೋಪಿಗಳು ಲೈಂಗಿಕ ಅಪರಾಧ ಎಸಗಿದವರೆಂಬುದನ್ನು ಕಂಡುಕೊಂಡಿದೆ.
ಇದೇ ಶಕ್ತಿ ಮಿಲ್ ಕಾಂಪೌಂಡ್‌ನಲ್ಲಿ ಈ ಮೊದಲು ಈ 3 ಆರೋಪಿಗಳು 18 ವರ್ಷ ಪ್ರಾಯದ ಟೆಲಿಫೋನ್ ಆಪರೇಟರ್ ಓರ್ವರ ಮೇಲೆ ಗ್ಯಾಂಗ್ ರೇಪ್ ಎಸಗಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ನ್ಯಾಯಾಲಯ ವಿಧಿಸಿತ್ತು.
ಐಪಿಸಿ ಸೆಕ್ಷನ್ 376 ಇ ಪ್ರಕಾರ ಈ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿತ್ತು.