ಕೋಬ್ರಾಪೋಸ್ಟ್ ಆರೋಪಕ್ಕೆ ತಡೆ ಹಾಕಿ: ಚು.ಆಯೋಗಕ್ಕೆ ಬಿಜೆಪಿ ಮನವಿ
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಬ್ರಾಪೋಸ್ಟ್ ನಡೆಸಿದ ರಹಸ್ಯ ಕಾರ್ಯಾಚರಣೆ ಸಿಡಿಯನ್ನು ಮಾಧ್ಯಮಗಳಲ್ಲಿ...
ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಬ್ರಾಪೋಸ್ಟ್ ನಡೆಸಿದ ರಹಸ್ಯ ಕಾರ್ಯಾಚರಣೆ ಸಿಡಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆ ಹಿಡಿಯಿರಿ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ.
ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಬಿಜೆಪಿ ವಿರುದ್ಧ ಕಾಂಗ್ರೆಸ್ ಒಳಸಂಚು ನಡೆಸುತ್ತಿದೆ. ಚುನಾವಣೆಗೂ ಮುನ್ನ ಬಿಜೆಪಿಗೆ ಧಕ್ಕೆ ತರಲೆಂದು ಇಂತಹ ದೊಡ್ಡ ಆರೋಪವನ್ನು ಮಾಡಲಾಗುತ್ತಿದೆ. ಕೋಬ್ರಾಪೋಸ್ಟ್ ಸಂಸ್ಥೆ ಮುಖಾಂತರ ಕಾಂಗ್ರೆಸ್ ಸುಳ್ಳು ಆರೋಪ ಮಾಡಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.
ವ್ಯವಸ್ಥಿತ ಸಂಚು ರೂಪಿಸಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿ ಕೋಬ್ರಾಪೋಸ್ಟ್ ಸಂಸ್ಥೆ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ರಹಸ್ಯ ಕಾರ್ಯಾಚರಣೆ ಸಿಡಿ ಬಿಡುಗಡೆ ಮಾಡಿದೆ.
ಇದು ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ಬಿಜೆಪಿ, ಕೂಡಲೇ ಕೋಬ್ರಾಪೋಸ್ಟ್ ರಹಸ್ಯಾ ಕಾರ್ಯಾಚರಣೆ ಸಿಡಿಯನ್ನು ಪ್ರಸಾರ ಮಾಡದಂತೆ ತಡೆಹಿಡಿಯಿರಿ ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ.