ಭಾರತ ಗೆಲ್ಲಲು 173 ರನ್ ಗುರಿ
ಮಿರ್ಪುರ್: ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಭಾರತಕ್ಕೆ 173 ರನ್ಗಳ ಬೃಹತ್ ಸವಾಲು ನೀಡಿದೆ.
ಬಾಂಗ್ಲಾದೇಶದ ಮಿರ್ಪುರ್ ನಲ್ಲಿ ನಡೆಯುತ್ತಿರುವ 2ನೇ ಸೆಮಿಫೈನಲ್ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಂಟಿಗ್ ಆಯ್ಕೆ ಮಾಡಿಕೊಂಡಿತು.
ಆಫ್ರಿಕಾ ಪರ ಆಟಗಾರರಾದ ಕೋಕ್ 6 ರನ್ ಗಳಿಸಿ ಔಟಾದರೆ, ಆ ನಂತರ ಬಂದ ಆಶಿಮ್ ಆಮ್ಲಾ 22 ರನ್ ಸಿಡಿಸಿ ಅಶ್ವಿನ್ ಬೌಲಿಂಗ್ನಲ್ಲಿ ಔಟಾದರು.
ನಂತರ ಜೊತೆಯಾದ ಡುಪ್ಲೆಸಿಸ್ ಹಾಗೂ ಡುಮಿನಿ ಉತ್ತಮ ಜೊತೆಯಾಟ ನೀಡಿದರು. ಡುಪ್ಲೇಸಿಸ್ 58 ರನ್ ಗಳಿಸಿ ನಿರ್ಗಮಿಸಿದರೆ, ಜೆ.ಪಿ. ಡುಮಿನಿ 45 ರನ್ಗಳಿಸಿ ಅಜೇಯರಾಗಿ ಉಳಿದರು.
ಭಾರತ ಪರ ಆರ್. ಅಶ್ವಿನ್ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.