ಮುಂಬೈ ಗ್ಯಾಂಗ್ ರೇಪ್: 3 ಕಾಮುಕರಿಗೆ ಗಲ್ಲು
ಮುಂಬೈ: ಛಾಯಾಚಿತ್ರ ಪತ್ರಕರ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೆಷನ್ಸ್ ಕೋರ್ಟ್ ಮೂವರು ಅತ್ಯಾಚಾರಿಗಳಿಗೆ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಇಲ್ಲಿನ ಶಕ್ತಿ ಮಿಲ್ಸ್ ಕಾಂಪೌಂಡ್ನಲ್ಲಿ ಛಾಯಾಚಿತ್ರ ಪತ್ರಕರ್ತೆಯ ಮೇಲೆ ಅಮಾನುಷವಾಗಿ ಅತ್ಯಾಚಾವೆಸಗಿದ್ದ ವಿಜಯ್ ಜಾಧವ್, ಕಾಸಿಂ ಬಂಗಾಳಿ ಹಾಗೂ ಸಲಿಂ ಅನ್ಸಾರಿಗೆ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ದು, ಮತ್ತೋರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಮೂವರು ಅಪರಾಧಿಗಳು ಪದೇ ಪದೇ ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಈ ಮೂವರಿಗೆ ಬದುಕುವ ಹಕ್ಕಿಲ್ಲ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬಂದು ಈ ಶಿಕ್ಷೆ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನ್ಯಾಯಾಲಯದಲ್ಲಿ ಅಂತಿಮ ವಾದ ನಡೆದಿದ್ದು, ನ್ಯಾಯಾಲಯವು ನಾಲ್ವರಲ್ಲಿ ಮೂವರು ಆರೋಪಿಗಳು ಲೈಂಗಿಕ ಅಪರಾಧ ಎಸಗಿದವರೆಂಬುದನ್ನು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಹೊಸ ಅತ್ಯಾಚಾರ ಕಾಯ್ದೆಯಡಿ ಸೆಷನ್ ಕೋರ್ಟ್ ಈ ನಾಲ್ವರು ಅಪರಾಧಿಗಳಿಗೆ ಶಿಕ್ಷೆ ನೀಡಿದೆ.
ಇದೇ ಶಕ್ತಿ ಮಿಲ್ ಕಾಂಪೌಂಡ್ನಲ್ಲಿ ಈ ಮೊದಲು ಈ 3 ಆರೋಪಿಗಳು 18 ವರ್ಷ ಪ್ರಾಯದ ಟೆಲಿಫೋನ್ ಆಪರೇಟರ್ ಓರ್ವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.