ಮೋದಿ ಹೆಸರು ಹೇಳಲು ವರುಣ್ ಗಾಂಧಿ ಹಿಂದೇಟು
ಬಿಜೆಪಿಯ ಎಲ್ಲ ಲೋಕಸಭಾ ಅಭ್ಯರ್ಥಿಗಳು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ...
ಲಖನೌ: ಬಿಜೆಪಿಯ ಎಲ್ಲ ಲೋಕಸಭಾ ಅಭ್ಯರ್ಥಿಗಳು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಜಪ ಮಾಡುತ್ತಿದ್ದಾರೆ. ಆದರೆ ಪಕ್ಷದ ಫೈರ್ಬ್ರಾಂಡ್ ಯುವ ನಾಯಕ ವರುಣಾ ಗಾಂಧಿ ಮಾತ್ರ ಮೋದಿ ಹೆಸರೇಳಲು ಹಿಂದೇಟು ಹಾಕುತ್ತಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿಯು ಆಗಿರುವ ವರುಣ್ ಗಾಂಧಿ ತಮ್ಮ ತಂದೆ ಸಂಜಯ್ ಗಾಂಧಿ ಪ್ರತಿನಿಧಿಸುತ್ತಿರುವ ಉತ್ತರ ಪ್ರದೇಶದ ಸುಲ್ತಾನಪುರದಿಂದ ಸ್ಪರ್ಧಿಸುತ್ತಿದ್ದು, ಚುನಾವಣೆ ಪ್ರಚಾರದ ವೇಳೆ ಅವರು ಎಲ್ಲೂ ಮೋದಿಯ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ.
ಆದರೆ ಇತ್ತೀಚಿಗಷ್ಟೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದ ವರುಣ್ ಗಾಂಧಿ, ಮಹಿಳೆಯರ ಸ್ವಾವಲಂಬನೆಗೆ ಸಂಬಂಧಿಸಿ ಸ್ವಸಹಾಯ ಗುಂಪುಗಳ ಮೂಲಕ ಅಮೇಠಿಯಲ್ಲಿ ರಾಹುಲ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅದೇ ಮಾದರಿಯ ಕೆಲಸಗಳನ್ನು ತಾವು ಸುಲ್ತಾನಪುರ್ದಲ್ಲಿ ಕೈಗೊಳ್ಳುವುದಾಗಿ ಹೇಳಿದ್ದರು.
ದೇಶದ ಬಹುತೇಕ ಬಿಜೆಪಿ ಅಭ್ಯರ್ಥಿಗಳು ಗುಜರಾತ್ ಮಾದರಿಯ ಜಪ ಮಾಡುತ್ತಿದ್ದರೆ ವರುಣ್ ಗಾಂಧಿ ಮಾತ್ರ ಅಮೇಠಿ ಮಾದರಿ ಬಗ್ಗೆ ಮಾತನಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಬಿಜೆಪಿ ವರುಣ್ ಗಾಂಧಿಯಿಂದ ವಿವರಣೆ ಸಹ ಕೇಳಿದೆ.