ಕೈ ಕಾರ್ಯಕರ್ತರ ನಡುವೆ ಘರ್ಷಣೆ, ರಮ್ಯಾ ರೋಡ್ ಶೋ ಅರ್ಧಕ್ಕೆ ಮೊಟಕು
ಮಂಡ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪೂನಃ..
ಮಂಡ್ಯ: ಮಂಡ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪೂನಃ ಸಾಬೀತಾಗಿದೆ. ಶನಿವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮೀಲಾಯಿಸಿರುವ ಘಟನೆ ನಡೆದಿದೆ.
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಇಂದು ರೋಡ್ ಶೋ ನಡೆಸುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ ಕಾರ್ಯಕರ್ತರು ಕೈ ಕೈ ಮೀಲಾಯಿಸಿದ್ದಾರೆ. ಇದರಿಂದಾಗಿ ಬೇಸರಗೊಂಡ ರಮ್ಯಾ ಅವರು ರೋಡ್ ಶೋವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ರಮ್ಯಾ ಅವರು ಬೇಲೂರು ಗ್ರಾಮದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಲಿಂಗರಾಜು ಹಾಗೂ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ನಡುವೆ ರೋಡ್ ಶೋ ವಾಹನವೇರುವ ವಿಷಯದಲ್ಲಿ ಜಗಳ ಸಂಭವಿಸಿ ಘರ್ಷಣೆಗೆ ತಿರುಗಿತು.
ಘರ್ಷಣೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತ ಶ್ರೀನಿವಾಸ್ ಎನ್ನುವವರ ಮೇಲೆ ರೋಡ್ ಶೋ ನಡೆಸುತ್ತಿದ್ದ ವಾಹನ ಹರಿದು ಕಾಲು ಮುರಿತಕ್ಕೊಳಗಾಗಿದೆ.