ಸೋನಿಯಾ ಗಾಂಧಿ ದೇಶದ್ರೋಹಿ ಮಗಳು: ರಾಮದಾಸ್
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಬ್ಬ ದೇಶದ್ರೋಹಿಯ ಮಗಳು ಎಂದು..
ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಬ್ಬ ದೇಶದ್ರೋಹಿಯ ಮಗಳು ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಬಿಜೆಪಿಯ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ರಾಮದಾಸ್, ಸೋನಿಯಾ ಗಾಂಧಿ ತಂದೆ ಇಟಲಿ ದೇಶ ಸೈನಿಕ. ಆತ ಇಟಲಿ ದೇಶದ ಗೌಪ್ಯ ಮಾಹಿತಿಯನ್ನು ಇತರೆ ದೇಶಗಳಿಗೆ ಮಾರಾಟ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇತರೆ ದೇಶಗಳಿಗೆ ಇಟಲಿಯ ರಹಸ್ಯ ಮಾಹಿತಿ ಮಾರಿದ ವ್ಯಕ್ತಿಯ ಮಗಳು ಸೋನಿಯಾ. ಅಂಥವರ ಮಗಳಿಗೆ ದೇಶದ ಮೇಲೆ ಪ್ರೀತಿ ಎಲ್ಲಿರುತ್ತೆ ಹೇಳಿ ಎಂದು ರಾಮದಾಸ್ ಪ್ರಶ್ನಿಸಿದ್ದಾರೆ.