ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೈ ಕಾರ್ಯಕರ್ತರ ಜಗಳ ಬೇಸರ ತಂದಿದೆ: ರಮ್ಯಾ

Vishwanath S
Updated On : 6 Apr 2014, 1:26 am

ಮಂಡ್ಯ: ಕೈ ಕಾರ್ಯಕರ್ತರ ಘರ್ಷಣೆಗೆ ಬೇಸರ ವ್ಯಕ್ತಪಡಿಸಿರುವ ಸಂಸದೆ ರಮ್ಯಾ, ಇನ್ನು ಮುಂದೆ ಹೀಗೆ ನಡೆಯುವುದಿಲ್ಲ. ಎಲ್ಲರು ಒಟ್ಟಾಗಿ ಸೇರಿ ಚುನಾವಣೆ ಎದುರಿಸುತ್ತೇವೆ ಎಂದು ಭಾನುವಾರ ಹೇಳಿದ್ದಾರೆ.

ಇಂದು ಕೆಆರ್‌ಎಸ್‌ನಲ್ಲಿ ಕಾಂಗ್ರೆಸ್ ರೋಡ್ ಶೋ ನಡೆಸುತ್ತಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ನಿನ್ನೆ ನಡೆದ ಘಟನೆಯಿಂದ ನನಗೆ ಬೇಸರವಾಗಿದೆ. ಆದರೆ ಇನ್ನು ಮುಂದೆ ಹೀಗೆ ನಡೆಯುದಿಲ್ಲ. ಎಲ್ಲರು ಒಟ್ಟಾಗಿ ಸೇರಿ ಚುನಾವಣೆ ಎದುರಿಸುವ ವಿಶ್ವಾಸ ನನಗಿದೆ ಎಂದರು. ಇಂದಿನ ಪ್ರಚಾರದಲ್ಲಿ ವಸತಿ ಸಚಿವ ಅಂಬರೀಷ್ ಅವರ ಬೆಂಬಲಿಗರು ಗೈರಾಗಿದ್ದು, ಲಿಂಗರಾಜು ಅವರ ಜತೆ ಸೇರಿ ಮತ್ತೊಂದು ದಿನ ಪ್ರಚಾರ ಮಾಡುವುದಾಗಿ ಹೇಳಿದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಮ್ಯಾ ಅವರು ಜಿಲ್ಲೆಯಾದ್ಯಂತ ಪ್ರಚಾರ ನಡೆಸುತ್ತಿದ್ದು, ನಿನ್ನೆ ಬೇಲೂರು ಗ್ರಾಮದಲ್ಲಿ ನಡೆದ ರೋಡ್ ಶೋ ವೇಳೆ ಎರಡು ಬಣಗಳಾದ ಲಿಂಗರಾಜು ಹಾಗೂ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ನಡುವೆ ರೋಡ್ ಶೋ ವಾಹನವೇರುವ ವಿಷಯದಲ್ಲಿ ಜಗಳ ಸಂಭವಿಸಿ ಘರ್ಷಣೆ ಕಾರಣವಾಯಿತು. ಇದರಿಂದಾಗಿ ಬೇಸರಗೊಂಡು ರಮ್ಯಾ ರೋಡ್ ಶೋವನ್ನು ಅರ್ಧಕ್ಕೆ ಮುಟುಕುಗೊಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement