ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾನು ಯಾರ ಜತೆಗೂ ಓಡಿ ಹೋಗಿಲ್ಲ: ಕೇಜ್ರಿವಾಲ್ ಖಡಕ್ ಉತ್ತರ

ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವಕಾಶವಾದಿ, ಆದುದರಿಂದಲೇ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಲೋಕಸಭಾ...

Rashmi Kasaragodu
Updated On : 7 Apr 2014, 3:45 am

ನವದೆಹಲಿ: ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವಕಾಶವಾದಿ, ಆದುದರಿಂದಲೇ ಅವರು ದೆಹಲಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ಟೀಕೆಗೆ ಕೇಜ್ರಿವಾಲ್ ಖಾರವಾಗಿಯೇ ಉತ್ತರಿಸಿದ್ದಾರೆ.

ತಾನು ದೆಹಲಿಯ ಗದ್ದುಗೆಯನ್ನು ತೊರೆದಿರುವುದು ಯಾಕೆ ಎಂಬುದಕ್ಕೆ ಉತ್ತರಿಸಿದ ಕೇಜ್ರಿವಾಲ್, ಕೊನೆಯುಸಿರಿನ ತನಕ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳಿದ್ದಾರೆ.

ಚಾಂದನಿ ಚೌಕ್ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಅಶುತೋಷ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಜ್ರಿವಾಲ್, ದೆಹಲಿಯಲ್ಲಿ 49 ದಿನಗಳ ಸರ್ಕಾರ ರಚಿಸಿದ ಆಪ್, ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಿದೆ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧ ಹೋರಾಡಬಹುದಿತ್ತಲ್ಲವೇ? ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ನಾನು ಯಾರ ಮಗಳ ಜತೆಯೂ ಓಡಿ ಹೋಗಿಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ ಕೇಜ್ರಿವಾಲ್.

ಆದಾಗ್ಯೂ, ಮಹಾಭಾರತ ಯುದ್ದಕ್ಕೆ ಮುನ್ನ ದುರ್ಯೋಧನ ಶ್ರೀಕೃಷ್ಣನನ್ನು ಭೇಟಿ ಮಾಡಿ ತನಗೆ ಸೈನ್ಯವನ್ನು ದಯಪಾಲಿಸಬೇಕೆಂದು ಬೇಡಿದರೆ, ಅರ್ಜುನ, ದೇವರೇ ನೀನೇ ನನ್ನೊಂದಿಗೆ ಬಾ ಎಂದು ಕರೆದಿದ್ದನು. ಇಂದು ಮೋದಿ ಮತ್ತು ರಾಹುಲ್ ಅವರಲ್ಲಿ ಧನಬಲವಿದೆ. ಆದರೆ ನನ್ನ ಜತೆ ದೇವರಿದ್ದಾನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement