ಅಮೆರಿಕಾ ಕೋರ್ಟ್ಗೆ ಪಾಸ್ಪೋರ್ಟ್ ಪ್ರತಿ ಸಲ್ಲಿಕೆಗೆ ಸೋನಿಯಾ ನಕಾರ
ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ...
ನ್ಯೂಯಾರ್ಕ್: ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪಾಸ್ಪೋರ್ಟ್ ಪ್ರತಿಯನ್ನು ಅಮೆರಿಕಾ ಕೋರ್ಟ್ಗೆ ನೀಡಲು ಭಾರತ ಸರ್ಕಾರ ಅನುಮತಿ ನೀಡಿಲ್ಲವೆಂಬ ಕಾರಣ ನೀಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೋರ್ಟ್ಗೆ ನೀಡಲು ನಿರಾಕರಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ ಕುರಿತಂತೆ ಅಮೆರಿಕದ ನ್ಯಾಯಾಲಯದಲ್ಲಿ ಸೋನಿಯಾ ವಿರುದ್ಧ ದಾವೆ ನಡೆಯುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಪಾಸ್ಪೋರ್ಟ್ ಪ್ರತಿಯನ್ನು ಏಪ್ರಿಲ್ ೭ರ ಒಳಗಾಗಿ ಸಲ್ಲಿಸಲು ನ್ಯೂಯಾರ್ಕ್ನ ಪೂರ್ವ ಜಿಲ್ಲೆಯ ಫೆಡರಲ್ ಕೋರ್ಟ್ ಮಾರ್ಚ್ 20ರಂದು ಸೋನಿಯಾಗೆ ಈ ಆದೇಶ ನೀಡಿತ್ತು.
ವೈಯಕ್ತಿಕ ಭದ್ರತೆ ಮತ್ತು ಗೌಪ್ಯತೆ ಕಾಪಡಬೇಕೆಂಬ ಸರ್ಕಾರದ ಹಿತದೃಷ್ಟಿಯಿಂದ ಪಾಸ್ಪೋರ್ಟ್ ಪ್ರತಿಯನ್ನು ನ್ಯಾಯಾಲಯಕ್ಕೆ ಕೊಡಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ಸೋನಿಯಾ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸಿಖ್ ನರಮೇಧಕ್ಕೆ ಸಂಬಂಧಿಸಿದಂತೆ ಅಮೆರಿಕ ಮೂಲದ ಸಿಖ್ಖರ ಮಾನವ ಹಕ್ಕುಗಳ ಸಂಘಟನೆ (ಸಿಖ್ಸ್ ಫಾರ್ ಜಸ್ಟೀಸ್) ಯೊಂದು ಸೋನಿಯಾ ವಿರುದ್ಧ ದಾವೆ ಹೂಡಿತ್ತು.
ಆದರೆ ಇದನ್ನು ಬಲವಾಗಿ ಪ್ರಶ್ನಿಸಿರುವ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ, ಸೋನಿಯಾ ಅವರು ನ್ಯೂಯಾರ್ಕ್ನ ಕ್ಯಾನ್ಸರ್ ಸೆಂಟರ್ನಲ್ಲಿ ಚಿಕಿತ್ಸೆಗೆ ಬಂದಿದ್ದಾಗ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಸಮನ್ಸ್ ಅನ್ನು ಅವರು ಸ್ವೀಕರಿಸಿರುವುದರಿಂದ ವಿಚಾರಣೆಗೆ ಹಾಜರಾಗಲೇಬೇಕಾಗುತ್ತದೆ ಎಂದು ಅದು ವಾದಿಸಿದೆ.