ಕಪಾಳಮೋಕ್ಷದ ನಂತರ ರಾಜ್‌ಘಾಟ್‌ನಲ್ಲಿ ಕೇಜ್ರಿ ಪ್ರಾರ್ಥನೆ ಸಲ್ಲಿಕೆ
ದೆಹಲಿಯಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಆಟೋ...
ನವದೆಹಲಿ: ದೆಹಲಿಯಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಆಟೋ ಚಾಲಕನೊಬ್ಬನಿಂದ ಹಲ್ಲೆಗೊಳಗಾದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್‌ಘಾಟ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಗಳವಾರ ರೋಡ್‌ಶೋ ನಡೆಸುತ್ತಿದ್ದ ವೇಳೆ ಲಲ್ಲಿ ಎಂದು ಗುರುತಿಸಲ್ಪಡುವ ಆಟೋಚಾಲಕನೊಬ್ಬ ಕೇಜ್ರಿವಾಲ್‌ಗೆ ಹಾರ ಹಾಕಿದ ನಂತರ ಕಪಾಳ ಮೋಕ್ಷ ಮಾಡಿದ್ದಾನೆ. ಈ ಘಟನೆಯಿಂದ ಬೇಸರಗೊಂಡ ಕೇಜ್ರಿವಾಲ್, ತನ್ನ ಬೆಂಬಲಿಗರೊಂದಿಗೆ ಗಾಂಧಿ ಸಮಾಧಿ ರಾಜ್‌ಘಾಟ್‌ಗೆ ತೆರಳಿ ಅಲ್ಲಿ ಮೌನವಾಗಿ ಕುಳಿತು ಪ್ರಾರ್ಥನೆ ಸಲ್ಲಿಸಿದ್ದು ಕಂಡು ಬಂತು.
ದೆಹಲಿಯ ಸುಲ್ತಾನ್‌ಪುರಿಯಲ್ಲಿ ರಾಖಿ ಬಿರ್ಲಾ ಪರವಾಗಿ ಪ್ರಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು.
ತನ್ನ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಜ್ರಿವಾಲ್, ತನ್ನ ಮೇಲೆ ಯಾಕೆ ಈ ರೀತಿ ಪದೇ ಪದೇ ಹಲ್ಲೆ ನಡೆಯುತ್ತಿದೆ? ಇದರ ಹಿಂದೆ ಯಾರ ಕೈವಾಡವಿದೆ? ಅವರೀಗೇನು ಬೇಕಾಗಿದೆ? ಇದರಿಂದ ಅವರಿಗೇನು ಲಾಭ? ಎಂದು ನಾನು ಚಿಂತಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.