ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೇಜ್ರಿವಾಲ್ ಕ್ಷಮೆಯಾಚಿಸಿದ ಆಟೋ ಚಾಲಕ ಲಾಲಿ

ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನನ್ನ ದೇವರು.

Lingaraj Badiger
Updated On : 9 Apr 2014, 12:59 pm

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನನ್ನ ದೇವರು. ಅವರು ನಿಜವಾದ ಹೀರೋ. ಹೀರೋ ನಂಬರ್ ಒನ್ ಎಂದು ನಿನ್ನೆ ಅವರಿಗೆ ಕಪಾಳಮೋಕ್ಷ ಮಾಡಿದ್ದ ಆಟೋ ಚಾಲಕ ಲಾಲಿ ಹಾಡಿ ಹೊಗಳಿದ್ದಾನೆ.

ಇಂದು ತಮ್ಮ ಕಪಾಳಕ್ಕೆ ಹೊಡೆದ ಲಾಲಿ ಮನೆಗೆ ತೆರಳಿದ್ದ ಕೇಜ್ರಿವಾಲ್ ಅವರ ಬಳಿ ಲಾಲಿ ಕ್ಷಮೆಯಾಚಿಸಿದ್ದು, ತಾನು ಮಾಡಿದ್ದು ತಪ್ಪು. ತನ್ನನ್ನು ಕ್ಷಮಿಸುವಂತೆ ಮನವಿ ಮಾಡಿಕೊಂಡಿದ್ದಾನೆ.

ನಿನ್ನೆ ವಾಯುವ್ಯ ದೆಹಲಿಯ ಸುಲ್ತಾನ್‌ಪುರಿಯಲ್ಲಿ ಆಪ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದ ವೇಳೆ ಆಟೋ ಚಾಲಕ ಲಾಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮೊದಲು ಹಾರ ಹಾಕಿ, ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement