ಜಯಪ್ರದಾ ವಿರುದ್ಧ ಕೇಸ್ ದಾಖಲು
ಮುಜಾಫರ್‌ನಗರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಮೇಲೆ...
ಉತ್ತರಪ್ರದೇಶ: ಮುಜಾಫರ್‌ನಗರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪ ಮೇಲೆ ರಾಷ್ಟ್ರೀಯ ಜನತಾ ದಳ ಅಭ್ಯರ್ಥಿ ಹಾಗೂ ಹಿರಿಯ ನಟಿ ಜಯಪ್ರದಾ ವಿರುದ್ಧಾ ಪ್ರಕರಣ ದಾಖಲಾಗಿದೆ.
ಬಿಜನೂರ್ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿ ಜಯಪ್ರದಾ ಅವರು ನಿನ್ನೆ ಅನುಮತಿ ಇಲ್ಲದೇ, ಸಾರ್ವಜನಿಕರ ಸಭೆ ನಡೆಸಿದ್ದಾರೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಇದೇ ಜಾಗದಲ್ಲಿ ಅನುಮತಿ ಪಡೆಯದೇ ಪ್ರಚಾರ ಕೈಗೊಂಡಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಜಯಪ್ರದಾ ವಿರುದ್ಧ ಪ್ರಕರಣ ದಾಖಲಾಗಿದ್ದು, ದೇಶದ ಮೂರು ರಾಷ್ಟ್ರೀಯ ಪಕ್ಷಗಳ ನಾಯಕರು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗಿದೆ.