ಪೊಲೀಸ್ ಪಿಸ್ತೂಲ್ನಿಂದ ಬಂಡೆ ಸಾವು: ಸಿಐಡಿ ವರದಿ
ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಶೂಟೌಟ್ ಪ್ರಕರಣದ ಸಿಐಡಿ ವರದಿ ಬಹಿರಂಗವಾಗಿದ್ದು, ಬಂಡೆ...
ಬೆಂಗಳೂರು: ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಶೂಟೌಟ್ ಪ್ರಕರಣದ ಸಿಐಡಿ ವರದಿ ಬಹಿರಂಗವಾಗಿದ್ದು, ಬಂಡೆ ಅವರಿಗೆ ತಗಲಿರುವ ಗುಂಡು ಪೊಲೀಸರ ರಿವಾಲ್ವರ್ದಾಗಿದೆ ಎಂದು ತಿಳಿದು ಬಂದಿದೆ.
ಗುಂಡೇಟಿನಿಂದ ಸಾವನ್ನಪ್ಪಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಪ್ರಕರಣದ ಸಿಐಡಿ ತನಿಖಾ ವರದಿ ಪ್ರಕಾರ, ಪೊಲೀಸರ ರಿವಾಲ್ವರ್ನಲ್ಲಿದ್ದ ಗುಂಡು ಬಂಡೆ ದೇಹಕ್ಕೆ ತಗುಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಸಿಐಡಿ ಮುಖ್ಯಸ್ಥ ಬಿಪಿನ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಬಂಡೆ ಸಾವಿನ ಪ್ರಕರಣದ ತನಿಖೆ ನಡೆಯುತ್ತಿತ್ತು.
ಗುಲ್ಬರ್ಗಾದಲ್ಲಿ ಗುಂಡಿನ ದಾಳಿ ನಡೆದು, ಸುಫಾರಿ ಹಂತಕ ಮುನ್ನ ಎಂಬುವವನನ್ನು ಎನ್ಕೌಂಟರ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಅವರಿಗೆ ಗುಂಡು ತಗಲಿ ಸಾವನ್ನಪ್ಪಿದ್ದರು.
ಬಂಡೆ ಸಾವಿನ ಬಗ್ಗೆ ತನಿಖೆ ನಡೆಸಬೇಕಾಗಿ ಕೋರಿ ಬಂಡೆ ಪತ್ನಿ ಮಲ್ಲಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಒಪ್ಪಿಸಿತ್ತು.
ಸಿಐಡಿ ತನಿಖೆ ಮೇಲೆ ನನಗೆ ಯಾವುದೇ ಭರವಸೆಯಿಲ್ಲ. ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿದೆ ಎಂದು ಶಂಕಿಸಿರುವ ಮಲ್ಲಮ್ಮ, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ತನಿಖಾ ವರದಿ ಬಂದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.