12ಕ್ಕೆ 'ಸ' ಸಂಗೀತ ಅಕಾಡೆಮಿ ಮತ್ತು 'ಸ' ಸುಗಮಸಂಗೀತ ಟ್ರಸ್ಟ್ ಉದ್ಘಾಟನೆ
ಬೆಂಗಳೂರು: ಮಾಸ್ಟರ್ ಹಿರಣ್ಣಯ್ಯ ಅವರ ರಂಗಭೂಮಿ ಗರಡಿಯಲ್ಲಿ ಬೆಳೆದ ವಯೊಲಿನ್ ಚಂದ್ರು ಕುಟುಂಬದ 'ಸ' ಸಂಗೀತ ಅಕಾಡೆಮಿ ಮತ್ತು 'ಸ' ಸುಗಮ ಸಂಗೀತ ಟ್ರಸ್ಟ್ ಏಪ್ರಿಲ್ 12ಕ್ಕೆ ಉದ್ಘಾಟನೆಗೊಳ್ಳಲಿದೆ.
ಶನಿವಾರ ಸಂಜೆ 5.00ಕ್ಕೆ ಬೆಂಗಳೂರಿನ ಬನಶಂಕರಿಯ ಎರಡನೇ ಹಂತದಲ್ಲಿರುವ ಆವರ್ ಸ್ಕೂಲ್ನ ಶ್ರೀ ವಿದ್ಯಾ ಆಡಿಟೋರಿಯಂನಲ್ಲಿ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಹಾಗೂ ಉಭಯಗಾನ ವಿದುಷಿ ಗುರು ಶ್ಯಾಮಲ ಜಿ.ಭಾವೆ ಅವರು 'ಸ' ಸಂಗೀತ ಅಕಾಡೆಮಿ ಮತ್ತು 'ಸ' ಸುಗಮಸಂಗೀತ ಟ್ರಸ್ಟ್ಗೆ ಚಾಲನೆ ನೀಡಲಿದ್ದಾರೆ.