ಕಲಾವಿದರು ಜೋಕರ್ಗಳಲ್ಲ: ಶಿವರಾಜ್ಕುಮಾರ್
ಕಲಾವಿದರು ಜೋಕರ್ಗಳಲ್ಲ, ಕಲಾವಿದರ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಿ..
ಶಿವಮೊಗ್ಗ: ಕಲಾವಿದರು ಜೋಕರ್ಗಳಲ್ಲ, ಕಲಾವಿದರ ಬಗ್ಗೆ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಿ ಎಂದು ಖ್ಯಾತ ನಟ ಶಿವರಾಜ್ಕುಮಾರ್ ಅವರು ಗುರುವಾರ ರಾಜಕಾರಣಿಗಳಿಗೆ ತಿರುಗೇಟು ನೀಡಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ಕುಮಾರ್ ಅವರು, ಕಲಾವಿದರ ಮೇಲಿನ ಟೀಕೆಗಳಿಂದ ತಮಗೆ ಬೇಸರವಾಗಿದೆ. ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ಆದರೆ ರಾಜಕಾರಣಿಗಳು ಕಲಾವಿದರ ಬಗ್ಗೆ ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದರು.
ಇದೇ ವೇಳೆ, ತಮ್ಮ ಪತ್ನಿ ಪರ ಪ್ರಚಾರಕ್ಕೆ ಬರುವಂತೆ ತಾವು ಯಾವ ಕಲಾವಿದರ ಮೇಲೂ ಒತ್ತಡ ಹಾಕಿಲ್ಲ. ಅವರು ತಮ್ಮ ಸ್ವಂತ ನಿರ್ಧಾರದಿಂದ ಪ್ರಚಾರಕ್ಕೆ ಬರುತ್ತಿದ್ದಾರೆ ಎಂದರು. ಅಲ್ಲದೆ ನಟ ದರ್ಶನ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಸಹ ಪತ್ನಿ ಗೀತಾ ಪರ ಪ್ರಚಾರಕ್ಕೆ ಬರುತ್ತಾರೆ ಎಂದು ಶಿವರಾಜ್ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.