ಬಿಜೆಪಿ ಬಲೂನ್ ಒಡೆಯಲಿದೆ: ರಾಹುಲ್ ಗಾಂಧಿ
ಭಾರತೀಯ ಜನತಾ ಪಕ್ಷದ ಬಲೂನ್ ಒಡೆಯಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ...
ಜುಂಜುನು: ಭಾರತೀಯ ಜನತಾ ಪಕ್ಷದ ಬಲೂನ್ ಒಡೆಯಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
2004 ಮತ್ತು 2009ರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಬಿಜೆಪಿಯ ಬಲೂನ್ ಸಿಡಿಯಲಿದೆ ಎಂದು ಅವರು ಗುಡುಗಿದ್ದಾರೆ.
ಯಾರೋ ಒಬ್ಬರು ಹೇಳಿದ್ದಾರೆ, ನಾನು ಪ್ರಧಾನಿಯಾಗಬೇಕು ಎಂಬ ಆಸೆ ಇಲ್ಲ. ನಾನು ಕಾವಲುಗಾರನಾಗಲು ಇಚ್ಛಿಸುತ್ತೇನೆ ಎಂದು. ಆದರೆ ಕಾವಲುಗಾರನು ಕದಿಯಬಲ್ಲನು ಎಂಬ ಮಾತು ಜನತೆ ಅರಿತರೆ ಸಾಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ ಭಾರತದ ಜನತೆಗೆ ವಂಚಿಸುತ್ತಿದೆ. ಬಿಜೆಪಿ ವಂಚನೆ ಬಗ್ಗೆ ಈಗಾಗಲೇ ಜನತೆ ಅರಿತ್ತಿದ್ದಾರೆ. ಹಾಗಾಗಿ ಮತ್ತೆ ಈ ಬಾರಿ ಬಿಜೆಪಿ ಸೋಲು ಕಾಣಲಿದೆ ಎಂದು ರಾಹುಲ್ ಹೇಳಿದ್ದಾರೆ.
ಯುಪಿಎ ಸರ್ಕಾರ 15ಕೋಟಿ ಜನರನ್ನು ಬಡತನ ರೇಖೆಯಿಂದ ಪಾರು ಮಾಡಿದೆ. ಇದು ಚಿಕ್ಕ ಕೆಲಸವಲ್ಲ. ನಮ ಪಕ್ಷಕ್ಕೂ ವಿರೋಧ ಪಕ್ಷಕ್ಕೂ ವ್ಯತ್ಯಾಸವಿದೆ. ಬಿಜೆಪಿ ಗುಜರಾತ್ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತದೆ. ಆದರೆ ನಮ್ಮ ಪಕ್ಷ ಹಕ್ಕು, ಬಡಜನತೆ ಮತ್ತು ದಬ್ಬಾಳಿಕೆಗೆ ಒಳಗಾದ ಜನತೆಯ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದು ರಾಹುಲ್ ತಿಳಿಸಿದ್ದಾರೆ.