ಉ. ಪ್ರದೇಶದಲ್ಲಿ ಅಮಿತ್ ಶಾ, ಅಜಂ ಖಾನ್ ಸಭೆಗಳಿಗೆ ನಿಷೇಧ
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಪ್ತ ಅಮಿತ್ ಶಾ ಅವರಿಗೆ ತೀರ ಹಿನ್ನೆಡೆಯಾಗಿದ್ದು, ಕೇಂದ್ರ ಚುನಾವಣಾ ಆಯೋಗ ಅಮಿತ್ ಶಾ ಸೇರಿ ಅಜಂ ಖಾನ್ ರ್ಯಾಲಿಗಳಿಗೆ ನಿಷೇಧ ಏರಿದೆ.
ಚುನಾವಣಾ ಪ್ರಚಾರದ ರ್ಯಾಲಿಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದ ಮೇಲೆ ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡ ಅಮಿತ್ ಶಾ ಹಾಗೂ ಸಚಿವ ಅಜಂ ಖಾನ್ ರ್ಯಾಲಿಗಳಿಗೆ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ನಿಷೇಧ ಏರಿದ್ದು, ಈ ಸಂಬಂಧ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ.
ಉತ್ತರ ಪ್ರದೇಶದಲ್ಲಿ ಅಮಿತ್ ಶಾ ಹಾಗೂ ಅಜಂ ಖಾನ್ ರ್ಯಾಲಿಗಳಿಗೆ ನಿಷೇಧ ಏರಿರುವ ಚುನಾವಣಾ ಆಯೋಗ, ಉತ್ತರ ಪ್ರದೇಶದ ಸರ್ಕಾರಕ್ಕೆ ಪತ್ರ ಬರೆದಿದ್ದು, ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಈ ಇಬ್ಬರು ನಾಯಕರ ವಿರುದ್ಧ ಕೂಡಲೆ ಎಫ್ಐಆರ್ ದಾಖಲಿಸುವಂತೆ ಸೂಚಿಸಿದೆ.
ಈ ಇಬ್ಬರು ನಾಯಕರಿಗೆ ಸಭೆ ಸಮಾರಂಭ, ಸಾರ್ವಜನಿಕ ಮೆರವಣಿಗೆಗಳು, ಸಾರ್ವಜನಿಕ ಸಮಾವೇಶ, ರೋಡ್ ಶೋಗಳಿಗೆ ನಿಷೇಧ ಏರಲಾಗಿದ್ದು, ಇವರು ಮುಂದೆ ಕೈಗೊಳ್ಳಬೇಕಿದ್ದ ಸಮಾವೇಶಗಳಿಗೆ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.