ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉಚಿತ ಕಿಡ್ನಿ ತಪಾಸಣಾ ಶಿಬಿರ

Vishwanath S
Updated On : 11 Apr 2014, 6:59 am

ಬೆಂಗಳೂರು: ನಗರದ ಕ್ಯಾಲಿಕ್ಸ್ ಕಿಡ್ನಿ ಸೆಂಟರ್ ಏ.12 ಮತ್ತು ಏ.13 ರಂದು ಉಚಿತ ಕಿಡ್ನಿ ಪರೀಕ್ಷಾ ಶಿಬಿರವನ್ನು ಆಯೋಜಿಸಿದೆ.

ಕಿಡ್ನಿಯಲ್ಲಿ ಕಲ್ಲು ಹಾಗೂ ಪ್ರೊಸ್ಟೇಟ್ ಸಮಸ್ಯೆ  ಎದುರಿಸುತ್ತಿರುವವರು ಈ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರದಲ್ಲಿ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು.

ನುರಿತ ಮೂತ್ರರೋಗ ತಙ್ಞರಾದ ಡಾ.ಸೂರಿರಾಜು ರೋಗಿಗಳಿಗೆ ಉಚಿತ ಪರೀಕ್ಷೆ ಮಾಡುವುದರೊಂದಿಗೆ ರೋಗಿಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ಏ.12 ಮತ್ತು ಏ.13 ರಂದು ನೀಡಲಿದ್ದಾರೆ.

ಏ.12 ರಂದು ಮಧ್ಯಾಹ್ನ 2 ರಿಂದ 5 ರವರೆಗೆ ಮತ್ತು ಏ.13 ರಂದು ಬೆಳಿಗ್ಗೆ 9 ರಿಂದ 2 ರವರೆಗೆ ಉಚಿತ ಕಿಡ್ನಿ ತಪಾಸಣಾ ಶಿಬಿರವನ್ನು ನಗರದ ಕುಮಾರಪಾರ್ಕ್ ಬಳಿ ಇರುವ ಕ್ಯಾಲಿಕ್ಸ್ ಕಿಡ್ನಿ ಸೆಂಟರ್ನಲ್ಲಿ ಆಯೋಜಿಸಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ - 080- 23341004 ಹಾಗೂ 812328654

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement