ಮುಲಾಯಂಗೆ ನೋಟಿಸ್
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದನ್ನು ವಿರೋಧಿಸಿದ್ದ ಸಮಾಜವಾದಿ...
ನವದೆಹಲಿ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದನ್ನು ವಿರೋಧಿಸಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರಿಗೆ ಶುಕ್ರವಾರ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಯುವಕರು ತಪ್ಪು ಮಾಡುವುದು ಸಹಜ. ಆ ತಪ್ಪಿಗೆ ಗಲ್ಲು ಶಿಕ್ಷೆಯಂತ ಘೋರ ಶಿಕ್ಷೆಯನ್ನು ವಿಧಿಸುವುದು ಎಷ್ಟು ಸರಿ ಎಂದು ಮುಲಾಯಂ ಆಘಾತಕಾರಿ ಹೇಳಿಕೆ ನೀಡಿದ್ದರು. ಇದಕ್ಕೆ ದೇಶ ವ್ಯಾಪ್ತಿ ಖಂಡನೆ ವ್ಯಕ್ತವಾಗಿತ್ತು. ಈ ಸಂಬಂಧ ಇಂದು ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ನೀಡಿದೆ.
ನಿನ್ನೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಚುನಾವಣಾ ಪ್ರಚಾರದ ವೇಳೆ ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾಕೆ? ಆಕಸ್ಮಿಕವಾಗಿಯೂ ಅತ್ಯಾಚಾರಗಳು ಸಂಭವಿಸುತ್ತವೆ. ಯುವಕರು ತಪ್ಪು ಮಾಡುವುದು ಸಹಜ. ಆದರೆ ಇಂತ ಸಣ್ಣ ತಪ್ಪಿಗೆ ಯುವಕರಿಗೆ ಗಲ್ಲು ಶಿಕ್ಷೆಯೆಂಬ ಘೋರ ಶಿಕ್ಷೆ ವಿಧಿಸಬೇಕ ಎಂದಿದ್ದರು.
ಅಲ್ಲದೆ ಎಸ್‌ಪಿ ಅಧಿಕಾರಕ್ಕೆ ಬಂದರೆ ಹೊಸ ಅತ್ಯಾಚಾರ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಹೇಳಿದ್ದರು. ಮುಲಾಯಂರ ಹೇಳಿಕೆಗೆ ದೇಶವ್ಯಾಪ್ತಿ ಖಂಡನೆ ವ್ಯಕ್ತವಾಗಿತ್ತು. ರಾಜಕಾರಣಿಗಳು, ಸಾಮಾಜಿಕ ಸಂಘಟನೆಗಳು ಹಾಗೂ ವಿವಿಧ ಮಹಿಳಾ ಪರ ಸಂಘಟನೆಗಳು ತೀವ್ರ ಆಕೋಶ ವ್ಯಕ್ತಪಡಿಸಿತ್ತು.