ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

4ನೇ ಹಂತ: 4 ರಾಜ್ಯ, 32 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯ

Vishwanath S
Updated On : 12 Apr 2014, 7:23 am

ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೆ ಹಂತದಲ್ಲಿ ಏಳು ಲೋಕಸಭಾ ಕ್ಷೇತ್ರ ಸೇರಿದಂತೆ ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಲ್ಲಿ ಮುಕ್ತಾಯಗೊಂಡಿದೆ.

ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಜನರು ಉತ್ಸುಕರಾಗಿ ತಮ್ಮ ಹಕ್ಕು ಚಲಾಯಿಸಿದ್ದರು. ಇಂದು ನಡೆದ ಮತದಾನದ ವೇಳೆ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ.

ಗೋವಾದ ಪಣಜಿಯಲ್ಲಿ ಇಂದು ನಡೆದ ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರಗಳಲ್ಲಿ ಶೇ. 75 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಸ್ಸಾಂನಲ್ಲೂ ಮತದಾರರು ಹೆಚ್ಚು ಉತ್ಸುಕರಾಗಿ ಮತ ಚಲಾಯಿಸುತ್ತಿದ್ದು, ಮತದಾನ ಪ್ರಕ್ರಿಯೆ ಮುಕ್ತಾಯ ವೇಳೆಗೆ ಶೇ. 72ರಷ್ಟು ಮತದಾನವಾಗಿದೆ. ಮತ್ತೊಂದೆಡೆ ತ್ರಿಪುರದಲ್ಲೂ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದ್ದು, ಶೇ. 82ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ಸಿಕ್ಕಿಂನಲ್ಲಿ 1 ಲೋಕಸಭಾ ಹಾಗೂ 32 ವಿಧಾನಸಭೆಗೆ ನಡೆದ ಮತದಾನದಲ್ಲಿ ಒಟ್ಟಾರೆ ಶೇ. 76ರಷ್ಟು ಮಂದಿ ಮತಚಲಾಯಿಸಿದ್ದಾರೆ.

ಸಿಕ್ಕಿಂನಲ್ಲಿ ಲೋಕಸಭೆ ಜತೆಗೆ ಅಲ್ಲಿನ ವಿಧಾನಸಭೆಗೆ ಕೂಡ ಚುನಾವಣೆ ನಡೆದಿದ್ದು, ಸಿಕ್ಕಿಂನಲ್ಲಿ 1 ಲೋಕಸಭಾ ಮತ್ತು 32 ವಿಧಾನಸಭೆ ಕ್ಷೇತ್ರಗಳಿಗೆ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಗೋವಾ 2, ತ್ರಿಪುರ 1 ಅಸ್ಸಾಂ 3 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement