ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಾಳೆ ‘ನಟರಂಗಿ’ ರಾಜಕೀಯ ರಂಗದ ರಂಗು ರಂಗಿನ ಮುಖವಾಡಗಳ ಪ್ರದರ್ಶನ

“ಮತವ ಪಡೆವ ನಾಟಕದಲಿ ಗೆಲುವು ಪಡೆದ ನಾಯಕರು

Lingaraj Badiger
Updated On : 12 Apr 2014, 1:53 am

“ಮತವ ಪಡೆವ ನಾಟಕದಲಿ ಗೆಲುವು ಪಡೆದ ನಾಯಕರು
ಮತವ ನೀಡಿ ಬಾಯಿ ಬಿಡುವ ನಾವು ಎಷ್ಟು ಅಮಾಯಕರು
ನಾಡಿಗಾಗಿ ಅವರದು ಆಗ ಮಾತ್ರ ಕಳಕಳಿ
ಅಧಿಕಾರದ ಗದ್ದುಗೆಯಲಿ ಎಲ್ಲವೂ ಸವಕಳಿ
ಹಣದ ಥೈಲಿ ಕಂಡಾಗ ಮಾಡುವರು ಕಥಕ್ಕಳಿ
ಥೈಲಿ ಖಾಲಿಯಾದ ಮೇಲೆ ಕಣ್ಣು ಬಾಯಿ ಪಿಳಿಪಿಳಿ”  - ಪಿ.ಎಂ.ಎಸ್.

ನಾಯಕರೆಂಬ ಅಭಿದಾನವನ್ನು ಹೊತ್ತು ನಮ್ಮನ್ನಾಳುವ ‘ನವರಂಗಿ’ ಅವತಾರದ ಪ್ರಜಾಪ್ರತಿನಿಧಿಗಳು ಸಮಯಸಾಧಕತನದ ಅವಕಾಶವಾದಿ ರಾಜಕಾರಣ ಮಾಡುತ್ತಾ, ಬಣ್ಣದ ಓಕಳಿಯಾಟವಾಡುತ್ತಾ, ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಾರೆ.   ಓಟು ಹಾಕಿ ಗೆಲ್ಲಿಸಿದ ಮತದಾರಪ್ರಭುವನ್ನು ಮೋಸಗೊಳಿಸುತ್ತಾರೆ.   ಸ್ವಾರ್ಥ ರಾಜಕಾರಣದಿಂದ ತನ್ನ ನಿಜ ಮುಖವನ್ನು ಮರೆಮಾಚಿ ತಮ್ಮ ರಂಗು ರಂಗಿನ ಮುಖವಾಡಗಳನ್ನು ಬದಲಾಯಿಸುವ ಈ  ‘ನಟರಂಗಿ’ಗಳು ತಾವು ‘ಯಾವ ನಟನಿಗಿಂತ ಕಡಿಮೆಯಿಲ್ಲಾ’  ಎಂಬಂತೆ ವರ್ತಿಸುತ್ತಿದ್ದಾರೆ. ಈ ಸುಸಂದರ್ಭದಲ್ಲಿ “ಪ್ರಜೆಯಾಗಿ ಪ್ರತಿಜ್ಞೆಮಾಡಿ, ಮತದಾನ ನನ್ನ ಹಕ್ಕೆಂದು” ಎಂಬ ಘೋಷ ವಾಕ್ಯದಂತೆ ಸ್ವಾರ್ಥವಿಲ್ಲದ ಸ್ವಸ್ಥ ಮನಸ್ಸಿನ ನಾಯಕನ ಆಯ್ಕೆಯ ಹಕ್ಕು ಈಗ ನಮ್ಮ ಕೈಯಲ್ಲಿ.  ಇದರ ಅರಿವು ಎಲ್ಲರಿಗೂ ಮೂಡಲಿ ಎಂದು ‘ಸಾಂಝೀ’ ಕಲಾವಿದ ಎಸ್.ಎಫ್.ಹುಸೇನಿಯವರು ತಮ್ಮ ಕಲ್ಪನೆಯ ಕೊನರು ಬೃಹದಾಕಾರವಾಗಿ ಬೆಳೆಯಲಿ ಎಂಬ  ಮಹದಾಶಯದೊಂದಿಗೆ ರಾಜಕೀಯ ದೊರೆಗಳ ಮುಖವಾಡದ ವಿಷಯವನ್ನೇ ತನ್ನ ಕಾರ್ಯಾಗಾರದ ವಸ್ತುವನ್ನಾಗಿಸಿಕೊಂಡು ಜನ ಜಾಗೃತಿಗೊಳಿಸುತ್ತಿದ್ದಾರೆ.  ಅವರ ಕೊನರು ಬೃಹದಾಕಾರವಾಗಿ ಬೆಳೆಯಲು ಕೆ.ಜಿ.ಎಲ್.ಡಿ ಆರ್ಟ್ ಗ್ಯಾಲರಿಯ ಕಲಾವಿದರಾದ ಕೆ.ಜಿ. ಲಿಂಗದೇವರುರವರು ಸಹಕರಿಸುತ್ತಿದ್ದಾರೆ. “ಪಕ್ಷ ಪಕ್ಷ ಕಟ್ಟಿದರೂ ಬೇಕು ಶೀಲರಾಷ್ಟ್ರ” ಎಂಬ ನುಡಿಯಂತೆ ‘ಶೀಲರಾಷ್ಟ್ರ’ದ ನಿರ್ಮಾಣ ಈಗ ನಿರ್ಮಾಪಕನಾದ ಮತದಾರಪ್ರಭುವಿನ ‘ಮತರಂಗಿ’ ಆಟದಲ್ಲಿದೆ.  ಜಾನಪದ ಕಾಗದ ಕಲೆಯ ಕಾಗದ, ಕತ್ತರಿ, ಕಲ್ಪನೆ ಮತ್ತು ಕರಗಳ ಸಂಗಮದಲ್ಲಿ ನಟರಂಗಿ ಅರಳಿದೆ.  ಮುಖವಾಡಗಳ ಅನಾವರಣದ  ಕಾರ್ಯಾಗಾರ ಮತ್ತು ಪ್ರದರ್ಶನ ನಿಮಗಾಗಿ.

ಕಾರ್ಯಾಗಾರ ಮತ್ತು ಪ್ರದರ್ಶನ ನಡೆಯುವ  ದಿನಾಂಕ 13-04-2014.  ಭಾನುವಾರ ಬೆಳಗ್ಗೆ  11-00 ಗಂಟೆಗೆ
ಎಲ್ಲಿ   :  ಕೆ.ಜಿ.ಡಿ.ಎಲ್. ಆರ್ಟ್ ಗ್ಯಾಲರಿ.
ನಂ 3,  3ನೇ ಅಡ್ಡರಸ್ತೆ, ವಿನಾಯಕ ಶಾಲೆ ಹತ್ತಿರ
ಸುಂಕದ ಕಟ್ಟೆ,  ಬೆಂಗಳೂರು 560091.
ದೂರವಾಣಿ ಸಂಖ್ಯೆ    : ಕೆ.ಜಿ.ಲಿಂಗದೇವರು – 9844380589. ಎಸ್.ಎಫ್.ಹುಸೇನಿ - 9845153277
ಮಿಂಚಂಚೆ:    sfhuseni @gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement