ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಳ್ಳಾರಿ: 8.52 ಕೋಟಿ ಹವಾಲಾ ಹಣದೊಂದಿಗೆ ರಾಮುಲು ಕರಪತ್ರ ಜಪ್ತಿ

ಖಾಸಗಿ ಫೈನಾನ್ಶಿಯರ್ ಬಾಬುಲಾಲ್ ಅಲಿಯಾಸ್ ಚೋರ್ ಬಾಬುಲಾಲ್ ಮನೆಯ ಮೇಲೆ ಶನಿವಾರ ಚುನಾವಣಾ ಅಧಿಕಾರಿಗಳು ದಾಳಿ..

Lingaraj Badiger
Updated On : 12 Apr 2014, 11:35 am

ಬಳ್ಳಾರಿ: ಖಾಸಗಿ ಫೈನಾನ್ಶಿಯರ್ ಬಾಬುಲಾಲ್ ಅಲಿಯಾಸ್ ಚೋರ್ ಬಾಬುಲಾಲ್ ಮನೆಯ ಮೇಲೆ ಶನಿವಾರ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ, 8.52 ಕೋಟಿ ರುಪಾಯಿ ಹವಾಲಾ ಹಣ ವಶಪಡಿಸಿಕೊಂಡಿದ್ದಾರೆ.

ದಾಳಿಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಖಾಸಗಿ ಫೈನಾನ್ಶಿಯರ್ ಆಗಿರುವ ಬಾಬುಲಾಲ್ ಎಂಬುವವರ ಮನೆ ಮೇಲೆ ಇಂದು ಬೆಳಗ್ಗೆ ನಾವು ದಾಳಿ ನಡೆಸಿದ್ದು, ದಾಳಿಯ ವೇಳೆ 8.52 ಕೋಟಿ ನಗದು ಹಾಗೂ ಹಣದ ಜೊತೆ ಶ್ರೀರಾಮುಲು ಭಾವಚಿತ್ರವುಳ್ಳ ಕರ ಪತ್ರ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೆ 4.30 ಕೋಟಿ ಅಂಚೆ ಕಚೇರಿ ಠೇವಣಿ, 5 ಕೋಟಿ ಮೌಲ್ಯದ ವಿವಿಧ ಬ್ಯಾಂಕ್‌ಗಳ ಚೆಕ್‌ಗಳು ಹಾಗೂ ನೂರಾರು ಎಕರೆ ಜಮೀನಿಗೆ ಸಂಬಂಧಿಸಿದ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಹಂಚಲು ಈ ಹಣ ಸಂಗ್ರಹಿಸಲಾಗಿದ್ದು, ಹಣದ ಬಗ್ಗೆ ಮಾಹಿತಿ ನೀಡುವಂತೆ ಬಾಬುಲಾಲ್ ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಚುನಾವಣಾ ಸಮಯದಲ್ಲಿ ಹವಾಲಾ ಹಣ ಸಂಗ್ರಹ ಆರೋಪದ ಮೇಲೆ ಐಪಿಸಿ ಸೆಕ್ಷೆನ್ 171, (ಇ) 188ರಡಿ ಬಾಬು ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದಲ್ಲದೇ ಹೊಸಪೇಟೆಯಲ್ಲೂ ದಾಳಿ ನಡೆಸಿರುವ ಚುನಾವಣಾ ಅಧಿಕಾರಿಗಳು, ಅಲ್ಲಿ ಮತ್ತೊಬ್ಬ ಫೈನಾನ್ಶಿಯರ್ ವಿಕ್ರಮ ಜೈನ್‌ಗೆ ಸೇರಿದ 1.22ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ.

ಇನ್ನು ಬಗ್ಗೆ ಮೈಸೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು, ತಮಗೂ ಬಾಬುಲಾಲ್‌ಗೂ ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ಮಾಡಿ ಹಣ ಜಪ್ತಿ ಮಾಡಿರುವುದು ಒಳ್ಳೆಯ ಕೆಲಸ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement