ಅನಂತ್ ಹುಡ್ಕೋ ಹಗರಣದ ಪುಸ್ತಕ ಬಿಡುಗಡೆ
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು 'ಹುಡ್ಕೋ 14 ಸಾವಿರ ಕೋಟಿ' ಎಂಬ..
ಬೆಂಗಳೂರು: ಕೇಂದ್ರದ ಮಾಜಿ ಸಚಿವ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ಕುಮಾರ್ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹುಡ್ಕೋ ಹಗರಣ ಕುರಿತ 'ಹುಡ್ಕೋ 14 ಸಾವಿರ ಕೋಟಿ' ಎಂಬ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಆನಂತ್ಕುಮಾರ್ ಹಗರಣಗಳ ಮಾಹಿತಿಯುಳ್ಳ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮುತಾಲಿಕ್, ಅನಂತ್ ಕುಮಾರ್ ಅವರು ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ವೇಳೆ 5 ಸಾವಿರ ಕೋಟಿ ಗುಳಂ ಮಾಡಿದ್ದಾರೆ. ಹುಡ್ಕೋ ಹಗರಣದಿಂದ ಸರ್ಕಾರಕ್ಕೆ 1 ಲಕ್ಷ ಕೋಟಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಅನಂತ್ ಕುಮಾರ್ ಅವರು ಒಟ್ಟು 14,500 ಕೋಟಿ ರುಪಾಯಿ ಅಕ್ರಮ ಎಸಗಿದ್ದಾರೆ. ಹುಡ್ಕೋ ಹಗರಣದಿಂದ ಬಂದ ಹಣದಲ್ಲಿ ಅನಂತ್ ಕುಮಾರ್ ಅವರು 50 ಕಾರ್ಪೋರೇಟ್ ಸಂಸ್ಥೆಗಳಿಗೆ 5 ಸಾವಿರ ಕೋಟಿ ಸಾಲ ನೀಡಿದ್ದಾರೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.