ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಧಾನಿ ಸಿಂಗ್ ವಿರುದ್ಧದ ಆರೋಪ ನಿರಾಧಾರ: ಪಿಎಂಓ ಸ್ಪಷ್ಟನೆ

Vishwanath S
Updated On : 13 Apr 2014, 6:49 am

ನವದೆಹಲಿ: ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಣತಿಯಂತೆ ನಡೆದುಕೊಳ್ಳುತ್ತಿದ್ದರು ಎಂಬ ಸಂಜಯ್ ಬಾರು ಆರೋಪವನ್ನು ಪ್ರಧಾನಿ ಕಾರ್ಯಾಲಯ ತಳ್ಳಿಹಾಕಿದೆ.

ಪ್ರಧಾನಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಸಂಜಯ್ ಬಾರು ಅವರು ಮಾಡಿರುವ ಆರೋಪಗಳು ನಿರಾಧಾರವಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿರಲಿಲ್ಲ ಎಂದು ಪ್ರಧಾನಿ ಮಾಧ್ಯಮ ಸಲಹೆಗಾರ ಪಂಕಜ್ ಪಚೌರಿ ಅವರು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರ ಅಣತಿಯಂತೆ ಪ್ರಧಾನಿಗಳು ಕಾರ್ಯನಿರ್ವಹಿಸುತ್ತಿದ್ದರು. ಯಾವುದೇ ಪ್ರಮುಖ ಕಡತಗಳನ್ನು ಸೋನಿಯಾ ಗಾಂಧಿ ನೋಡಿ ಸಹಿ ಮಾಡುವಂತೆ ಆದೇಶಿಸಿದರೆ ಮಾತ್ರ ಸಿಂಗ್ ಸಹಿ ಹಾಕುತ್ತಿದ್ದರು ಎಂಬ ಆರೋಪ ಸುಳ್ಳು. ಏಕೆಂದರೆ ಪ್ರಧಾನಿ ಕಾರ್ಯಾಲಯಕ್ಕೆ ಸಂಬಂಧಿಸಿದ ಯಾವುದೇ ಕಡತಗಳನ್ನು ಸೋನಿಯಾಗೆ ತೋರಿಸಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ನೀಡಿದೆ.

ಅಧಿಕಾರ' ಎಂದಿಗೂ ಪ್ರಧಾನಿ ಕೈಯಲ್ಲಿಯೇ ಇರಲಿಲ್ಲ, ಎಲ್ಲವೂ ಸೋನಿಯಾ ಆಣತಿಯಂತೆಯೇ. 2009ರಲ್ಲಿ ಸರ್ಕಾರ ರಚನೆಯಾದಾಗ, ಪ್ರಣಬ್‌ರನ್ನು ಹಣಕಾಸು ಸಚಿವರನ್ನಾಗಿಸಿದ್ದು ಸೋನಿಯಾರೇ. ಇದನ್ನು ನೆಪಕ್ಕೂ ಪ್ರಧಾನಿಗೆ ಹೇಳಿರಲಿಲ್ಲ. 2004-08ರವರೆಗೆ ಪ್ರಧಾನಿಗೆ ಮಾಧ್ಯಮ ಸಲಹೆಗಾರ ಸಂಜಯ ಬಾರು ಬರೆದ ಪುಸ್ತಕದಲ್ಲಿ ಇವು ಪ್ರಸ್ತಾಪವಾಗಿವೆ. 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‌' ಹೊತ್ತಗೆಯ ಅಂಶಗಳನ್ನು ಪ್ರಧಾನಿ ಕಾರ್ಯಾಲಯ ತಿರಸ್ಕರಿಸಿದೆ.

ಬಾರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವ ಅಂಶಗಳು:

-ಹಿರಿಯ ಸಚಿವರು ಪ್ರಧಾನಿಗೆ ಏನನ್ನೂ ಹೇಳುತ್ತಿರಲಿಲ್ಲ.

-ಆಗಿನ ವಿದೇಶ ಸಚಿವ ಪ್ರಣಬ್, ಸೋನಿಯಾಗೆ ಹೇಳಿ 3 ದಿನ ಬಳಿಕ ಪ್ರಧಾನಿಗೆ ಅಮೆರಿಕ ಪ್ರವಾಸ ವರದಿ ನೀಡಿದ್ದರು!

-ವಯಲಾರ್ ರವಿ, ಎ.ಕೆ. ಆ್ಯಂಟನಿ ಸೇರಿದಂತೆ ಕೆಲ ಹಿರಿಯ ಸಚಿವರು ಪ್ರಧಾನಿಗೆ ಸಂಕಷ್ಟ ಸಮಯ ತಂದಿಟ್ಟಿದ್ದರು.

-ನರೇಗಾ, ಭಾರತ್ ನಿರ್ಮಾಣ್ ಸೇರಿ ಕೆಲವು ಯೋಜನೆಗಳ ಬಗ್ಗೆ ಸೋನಿಯಾ, ರಾಹುಲ್ ಮಾತ್ರ ಹೆಗ್ಗಳಿಕೆ ಪಡೆದಿದ್ದರು. 

-ರಾಷ್ಟ್ರೀಯ ಸಲಹಾಗಾರ ಮಂಡಳಿ(ಎನ್‌ಎಸಿ) ರಚಿಸಿದ್ದೇ ಸೋನಿಯಾಗೆ ಅಧಿಕಾರ ದೊರೆಯುವಂತೆ ಮಾಡಲು.

-ಪ್ರಧಾನಿ ಸಂಬಂಧ ಚಿದು ಜೊತೆಗೇ ಚೆನ್ನಾಗಿತ್ತು. ಆದರೆ ಪ್ರಣಬ್  ಸೌಜನ್ಯಕ್ಕೂ ಬಜೆಟ್ ಕರಡು ತೋರಿಸುತ್ತಿರಲಿಲ್ಲ.

-ಒಂದು ವೇಳೆ 2009ರಲ್ಲಿ ಯುಪಿಎ ಸೋತಿದ್ದರೆ ಸಂಪೂರ್ಣ ಹೊಣೆ ಪ್ರಧಾನಿಯವರದ್ದೇ ಆಗಿರುತ್ತಿತ್ತು.

-ಸಂಪುಟಕ್ಕೆ 2009ರಲ್ಲಿ ರಾಜಾ, ಟಿ.ಆರ್. ಬಾಲು ತೆಗೆದುಕೊಳ್ಳಲು ಒಪ್ಪಿರಲಿಲ್ಲ. ಆದರೆ ಇವರ ಮಾತೇ ನಡೆಯಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement