ಕಾಂಗ್ರೆಸ್ನಿಂದ ಮಾತ್ರ ಸಾಮಾಜಿಕ ನ್ಯಾಯ: ಚಿರಂಜೀವಿ
ವೀರಪ್ಪ ಮೊಯ್ಲಿ ಪರ ಚಿರು ಪ್ರಚಾರ...
ಬೆಂಗಳೂರು: ಕಾಂಗ್ರೆಸ್ನಿಂದ ಮಾತ್ರ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿದ್ದು, ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ ಮತ ನೀಡಿ ಎಂದು ಹೇಳಿದರು.
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿಗೆ ಮತ ನೀಡಿ ಗೆಲ್ಲಿಸಿದರೆ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ನೆಲೆಯೂರುತ್ತದೆಂದು ಮತದಾರರಿಗೆ ಕರೆ ನೀಡಿದ್ದಾರೆ.
ಯಲಹಂಕದಲ್ಲಿ ನಡೆದ ಪ್ರಚಾರಾಂದೋಲನದಲ್ಲಿ ಮಾತನಾಡಿದ ಚಿರಂಜೀವಿ, ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. ಗುಜರಾತಿನಲ್ಲಿ ಅಭಿವೃದ್ಧಿಯೇನೂ ಆಗಿಲ್ಲ. ಸುಮ್ಮನೆ ಸುಳ್ಳು ಪ್ರಚಾರ ನಡೆಸಿ ಮತಗಿಟ್ಟಿಸಿಕೊಳ್ಳಲು ಯತ್ನಿಸಲಾಗುತ್ತಿದೆಯಷ್ಟೇ ಅದನ್ನೆಲ್ಲಾ ನಂಬಿ ಮತ ಹಾಕಿಬಿಡಬೇಡಿ ಎಂದು ಎಚ್ಚರಿಸಿದ್ದಾರೆ.
ಗುಜರಾತ್ ವಾಸ್ತವಾಂಶದ ಕುರಿತು ಸಿಪಿಎಂ ಪಕ್ಷ ಇತ್ತೀಚೆಗೆ ಬಿಡುಗಡೆ ಮಾಡಿರುವ ಪುಸ್ತಕವನ್ನು ಉಲ್ಲೇಖಿಸಿ ಪ್ರಚಾರ ನಡೆಸಿದ ಚಿರಂಜೀವಿ, ಗುಜರಾತಿನಲ್ಲಿ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದೆ ಹಾಗೂ ಕಾರ್ಮಿಕರ ಶೋಷಣೆಯೂ ನಡೆಯುತ್ತಿದೆಯೆಂದು ಆರೋಪಿಸಿದ್ದಾರೆ.
ನೀವು ಸುಮ್ಮನೆ ಬಿಜೆಪಿಯವರ ತರಾವರಿ ಮಾರ್ಕೆಟಿಂಗ್ ಗಿಮಿಕ್ಕಿಗೆ ಮಾರು ಹೋಗುವ ಬದಲಾಗಿ ವಾಸ್ತವಾಂಶದೆಡೆಗೂ ಕೊಂಚ ಚಿತ್ತ ಹರಿಸಿ ಎಂದು ಕರೆ ನೀಡಿದ್ದಾರೆ.