ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೇಶಕ್ಕೆ ಸಂವಿಧಾನಿಕ ಹಕ್ಕು ನೀಡಿದ್ದು ಅಂಬೇಡ್ಕರ್: ಮೋದಿ

Vishwanath S
Updated On : 14 Apr 2014, 2:15 am

ಅಹಮದಾಬಾದ್: ದೇಶಕ್ಕೆ ಸಂವಿಧಾನಿಕ ಹಕ್ಕು ನೀಡಿದ್ದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೊರತು ಕಾಂಗ್ರೆಸ್ ಅಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಉತ್ತರಪ್ರದೇಶದ ಲಖೀಂಪುರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿಗೆ ಇತಿಹಾಸ ಗೊತ್ತಿಲ್ಲ ನಮಗೆ ಸಂವಿಧಾನಿಕ ಅಧಿಕಾರ ನೀಡಿದ್ದು ಅಂಬೇಡ್ಕರ್ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದರು.

ನಮಗೆ ಸಂವಿಧಾನಿಕ ಅಧಿಕಾರ ನೀಡಿದ್ದು ಹಾಗೂ ಸಂವಿಧಾನಕ್ಕೆ ಬಲ ನೀಡಿದ್ದು ಕಾಂಗ್ರೆಸ್ ಎನ್ನುವ ಮೂಲಕ ರಾಹುಲ್ ಅಂಬೇಡ್ಕರನ್ನು ಅವಮಾನಿಸಿರುವುದು ದುರಾದೃಷ್ಟಕರ. ಅಂಬೇಡ್ಕರ್‌ರಂತಹ ಮಹಾನ್ ಚೇತನಕ್ಕೆ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿ ನೀಡದೆ ಕಾಂಗ್ರೆಸ್ ಅವರನ್ನು ಅವಮಾನಿಸಿದೆ. ಅಂಬೇಡ್ಕರ ಸಾಧನೆ ನೋಡಿ ಎನ್‌ಡಿಎ ಸರ್ಕಾರ ಅಂಬೇಡ್ಕರ್‌ಗೆ ಭಾರತರತ್ನ ನೀಡಿದೆ ಎಂದು ಮೋದಿ ಹೇಳಿದರು.

ದೇಶದ ಜನತೆಗೆ ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಹಾಗೂ ಆಹಾರದ ಹಕ್ಕು ನೀಡಿದ್ದು ಯುಪಿಎ ಸರ್ಕಾರ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ 123ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆ ಅಂಬೇಡ್ಕರ್ ಹೆಸರನ್ನು ರಾಜಕೀಯಕ್ಕೆ ಪಕ್ಷಗಳು ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement