ಇದು ಗಾಂಧಿ ಕುಟಂಬದ ಟೀ ಪಾರ್ಟಿ ಅಲ್ಲ, ಸೈದ್ಧಾಂತಿಕ ಯುದ್ಧ: ಪ್ರಿಯಾಂಕಾ
ಇದು ಗಾಂಧಿ ಕುಟಂಬುದ ಟೀ ಪಾರ್ಟಿ ಅಲ್ಲ..
ಸುಲ್ತಾನ್ಪುರ್: ಇದು ಗಾಂಧಿ ಕುಟಂಬುದ ಟೀ ಪಾರ್ಟಿ ಅಲ್ಲ, ಎರಡು ಕುಟುಂಬಗಳ ನಡುವಿನ ಸೈದ್ಧಾಂತಿಕ ಯುದ್ಧ ಎಂದು ಪ್ರಿಯಾಂಕಾ ಗಾಂಧಿ ಮಂಗಳವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ಸಹೋದರ ವರಣ್ ಗಾಂಧಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ಪ್ರಿಯಾಂಕಾ ವಾದ್ರಾ ಅವರು ಸಭ್ಯತೆಯ ಲಕ್ಷ್ಮಣ ರೇಖೆ ದಾಟಿದ್ದಾರೆ. ವೈಯಕ್ತಿಕ ಟೀಕೆಗಳನ್ನು ಬಿಟ್ಟು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ವರಣ್ ಟೀಕಿಸಿದ್ದರು. ವರುಣ್ ಟೀಕೆಗೆ ತಿರುಗೇಟು ನೀಡಿದ ಪ್ರಿಯಾಂಕಾ ವಾದ್ರಾ ನಾನು ಎಂದಿಗೂ ಸಭ್ಯತೆಯ ಲಕ್ಷ್ಮಣ ರೇಖೆ ದಾಟಿಲ್ಲ ಎಂದು ಹೇಳಿದರು.
ಗಾಂಧಿ ಕುಟುಂಬದ ಕುಡಿಯಾಗಿರುವ ಬಿಜೆಪಿ ಯುವ ನಾಯಕ ವರಣ್ ಗಾಂಧಿ ಆಯ್ಕೆ ಮಾಡಿಕೊಂಡಿರುವ ದಾರಿ ಸರಿಯಿಲ್ಲ. ಅವರು ಹಾರಿಕೊಂಡಿರುವ ದಾರಿ ನಮ್ಮ ಕುಟುಂಬಕ್ಕೆ ವಿರುದ್ಧವಾದದ್ದು, ಹೀಗಾಗಿ ವರುಣ್ ನಮ್ಮ ಕುಟುಂಬಕ್ಕೆ ವಿಶ್ವಾಸದ್ರೋಹ ವೆಸಗಿದ್ದಾರೆ ಎಂದು ಪ್ರಿಯಾಂಕಾ ವಾದ್ರಾ ಹೇಳಿದರು. ನನ್ನ ತಂದೆ ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದೇಶದ ಐಕ್ಯತೆಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದನ್ನು ಯಾರು ಮರೆಯಬಾರದು. ಅದರ ಬಗ್ಗೆ ಹಗುರವಾಗಿ ಮಾತಾಡಬಾರದು ಎಂದರು.
ಉತ್ತರಪ್ರದೇಶದ ಸುಲ್ತಾನ್ಪುರದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪ ಅಭ್ಯರ್ಥಿ ವರುಣ್ ಗಾಂಧಿ ಇಂದು ನಾಮಪತ್ರ ಸಲ್ಲಿಸಿದರು. ಅಪಾರ ಬಿಜೆಪಿ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ನಾಮಪತ್ರ ಸಲ್ಲಿಸಿದರು.
ಈ ಹಿಂದೆ ಪ್ರಿಯಾಂಕಾ ವಾದ್ರಾ ವರುಣ್ ಗಾಂಧಿ ಆಯ್ಕೆ ಮಾಡಿಕೊಂಡಿರುವ ಹಾದಿ ಸರಿಯಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ವರುಣ್ ಗಾಂಧಿ ಯಾರು ಸಭ್ಯತೆಯ ಲಕ್ಷ್ಮಣ ರೇಖೆ ದಾಟಬಾರದು. ಇಲ್ಲಿ ವೈಯಕ್ತಿಕ ಹೇಳಿಕೆಗಳನ್ನು ಬಿಟ್ಟು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಿ ಎಂದು ಟೀಕಿಸಿದ್ದರು.