ಕವಿ ವಿಜಯ್ ಶೇಷಾದ್ರಿಗೆ ಪುಲಿಟ್ಜರ್ ಪ್ರಶಸ್ತಿ
ಬೆಂಗಳೂರು ಮೂಲದ ಭಾರತೀಯ...
ನ್ಯೂಯಾರ್ಕ್: ಬೆಂಗಳೂರು ಮೂಲದ ಭಾರತೀಯ ಸಂಜಾತ ಕವಿ ವಿಜಯ್ ಶೇಷಾದ್ರಿ ಅವರಿಗೆ ಕಾವ್ಯ ವಿಭಾಗದಲ್ಲಿ ಪ್ರತಿಷ್ಠಿತ 2014ರ ಪುಲಿಟ್ಜರ್ ಪ್ರಶಸ್ತಿ ಲಭಿಸಿದೆ.
ವಿಜಯ್ ಶೇಷಾದ್ರಿ ಅವರಿಗೆ 3 ಸೆಕ್ಷನ್ಸ್ ಕವನ ಸಂಗ್ರಹಕ್ಕಾಗಿ ಪತ್ರಿಕೋದ್ಯಮದಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ. ಹುಟ್ಟಿನಿಂದ ಬುದ್ಧಿ ಮಾಂದ್ಯತೆವರೆಗಿನ ಮಾನವ ಪ್ರಜ್ಞೆಯನ್ನು ಪರೀಕ್ಷಿಸುವ ಕವನಗಳನ್ನು ಸಂಗ್ರಹಣೆ ಇದಾಗಿದೆ. ಪತ್ರಿಕೋದ್ಯಮದ ವಿವಿಧ ರಂಗಗಳಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ ಪುಲಿಟ್ಚರ್ ಪ್ರಶಸ್ತಿಯ 98ನೇ ವಾರ್ಷಿಕ ಪ್ರಶಸ್ತಿಯನ್ನು ಪುಲಿಟ್ಜರ್ ಪ್ರಶಸ್ತಿ ಮಂಡಳಿ ನಿನ್ನೆ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಕಟಿಸಿದೆ.
ಕೊಲಂಬಿಯಾ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿರುವ 60ರ ಹರೆಯದ ಶೇಷಾದ್ರಿ ಅವರು ತಮಗೆ ಒದಗಿರುವ ಪುಲಿಟ್ಜರ್ ಪ್ರಶಸ್ತಿಗಾಗಿ 10 ಸಾವಿರ ಡಾಲರ್ ನಗದು ಬಹುಮಾನವನ್ನು ಪಡೆಯಲಿದ್ದಾರೆ.
1954ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶೇಷಾದ್ರಿ ಐದನೇ ವಯಸ್ಸಿಗೆ ಅಮೆರಿಕಾಕ್ಕೆ ಹೋಗಿದ್ದರು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದ ಐದನೇ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೆ ವಿಜಯ್ ಶೇಷಾದ್ರಿ ಪಾತ್ರರಾಗಿದ್ದಾರೆ.