ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮನುಷ್ಯತ್ವ ಇಲ್ಲದ ಮೋದಿ ದೇಶದ ಪ್ರಧಾನಿ ಆಗಬೇಕೇ: ಸಿದ್ದು

Vishwanath S
Updated On : 15 Apr 2014, 6:57 am

ಹುಬ್ಬಳ್ಳಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮನುಷ್ಯತ್ವ ಇಲ್ಲ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಹುಬ್ಬಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಗುಜರಾತ್ ಕೋಮುಗಲಭೆ ವೇಳೆ ಸಾವಿರಾರು ಮಂದಿ ಮೃತಪಟ್ಟಿದ್ದರು. ಇದರಿಂದ ಬೇಸರಗೊಂಡಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಮೋದಿಗೆ ಮನುಷ್ಯತ್ವ ಇಲ್ಲ ಎಂದು ಹೇಳಿದ್ದರು. ಇಂತ ಮೋದಿ ದೇಶದ ಪ್ರಧಾನಿಯಾದರೆ ದೇಶ ಕೋಮುಗಲಭೆಗೆ ಸಾಕ್ಷಿಯಾಗುತ್ತದೆ ಎಂದರು.

ರಾಷ್ಟ್ರೀಯ ಸ್ವಯಂಸೇವಾ ಸಂಘ ಎಂದಿಗೂ ಬಡವರ ಚಿಂತೆ ಮಾಡಿಲ್ಲ ಅಂತಹ ಆರ್‌ಎಸ್‌ಎಸ್‌ನ ಕಟ್ಟಾ ಅನುಯಾಯಿ ಆಗಿರುವ ಮೋದಿ ಪ್ರಧಾನಿಯಾದರೆ ಬಡವರು ಸಂಕಷ್ಟಕ್ಕೀಡಾಗಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯಲ್ಲಿ ಹಿರಿಯ ನಾಯಕರ ಮಾತಿಗೆ ಕಿಮ್ಮತ್ತು ಕಾಸು ಬೆಲೆಯಿಲ್ಲ ಡಿನೋಟಿಫಿಕೇಷನ್ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಇವರನ್ನು ಬಿಜೆಪಿಗೆ ಪುನಃ ಸೇರಿಸಿಕೊಳ್ಳುವುದಕ್ಕೆ ಬಿಜೆಪಿ ವರಿಷ್ಠರಾದ ಸುಷ್ಮಾ ಸ್ವರಾಜ್ ಹಾಗೂ ಎಲ್.ಕೆ. ಆಡ್ವಾಣಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದಕ್ಕೆ ಯಾವುದೇ ಮಹತ್ವ ಕೊಡದೇ ಯಡಿಯೂರಪ್ಪ ಹಾಗು ಶ್ರೀರಾಮುಲುರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಸಿದ್ದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement