ರಾಜನಾಥ್ ವಾಜಪೇಯಿದ್ದಂತೆ : ಮುಸ್ಲಿಂ ಧಾರ್ಮಿಕ ಮುಖಂಡ
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮಾಜಿ ಪ್ರಧಾನಿ ಅಟಲ್ ಬಿಹಾರಿ...
ಲಖನೌ: ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇದ್ದಂತೆ, ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕಂಡರೆ ಮುಸ್ಲಿಮರಿಗೆ ಭಯವಿದೆ ಎಂದು ಶಿಯಾ ಮುಸ್ಲಿಂ ಜನಾಂಗದ ಧಾರ್ಮಿಕ ಮುಖಂಡ ಮೌಲಾನ ಕಲ್ಬೆ ಜಾವದ್ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟೀರುವ ಬಿಜೆಪಿ, ಉತ್ತರಪ್ರದೇಶದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಬಿಜೆಪಿಗೆ ಬೆಂಬಲಿಸುವಂತೆ ಕೋರಿದರು. ಶಿಯಾ ಮುಸ್ಲಿಂ ಜನಾಂಗದ ಧಾರ್ಮಿಕ ಮುಖಂಡ ಮೌಲಾನ ಕಲ್ಬೆ ಜಾವದ್ ಜೊತೆ ರಾಜನಾಥ್‌ಸಿಂಗ್ ಜೊತೆ ಸುದೀರ್ಘ ಮಾತುಕತೆ ನಡೆಸಿದರು.
ಸಭೆಯ ಬಳಿಕ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನ ವೇಳೆ ಮೌಲಾನಾ ಕಲ್ಬೆ ಜಾವದ್, ಉತ್ತರ ಪ್ರದೇಶ ಮತದಾರರ ದೃಷ್ಟಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಈಗಲೂ ಸುವರ್ಣ ವ್ಯಕ್ತಿಯಾಗಿ ನಿಲ್ಲುತ್ತಾರೆ. ಅದರಂತೆ ವಾಜಪೇಯಿ ಸ್ಥಾನಕ್ಕೆ ಇಂದು ರಾಜನಾಥ್ ಸಿಂಗ್‌ರನ್ನು ಹೋಲಿಕೆ ಮಾಡಬಹುದಾಗಿದೆ ಎಂದರು.
ಮಾಜಿ ಪ್ರಧಾನಿ ವಾಜಪೇಯಿ ಅವರ ಪ್ರಭಾವ ಈಗಲೂ ಉತ್ತರಪ್ರದೇಶದಲ್ಲಿದೆ ಇದರಿಂದಾಗಿಯೆ ಲಖನೌ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ವಾಜಪೇಯಿ ಸಂಸದರಾಗಿ ಆಯ್ಕೆಗೊಂಡಿದ್ದರು. ಅದರಂತೆ ಈ ಬಾರಿಯು ಶಿಯಾ ಮುಸ್ಲಿಂರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದರು.
ಉತ್ತರ ಪ್ರದೇಶದ ಮುಸ್ಲಿಂ ಮತದಾರರ ಒಲವನ್ನು ಸಂಪಾದಿಸಲು ಮುಂದಾಗಿರುವ ರಾಜನಾಥ್ ಸಿಂಗ್, ಜಾತ್ಯಾತೀತ ಪಕ್ಷಗಳಿಗೆ ತಮ್ಮ ಬೆಂಬಲ ಸೂಚಿಸಿದ್ದ ಮೌಲಾನ ಕಲ್ಬೆ ಸಿದ್ದಿಖ್ ಮತ್ತು ಮೌಲಾನ ಖಲೀದ್ ರಶೀದ್‌ರನ್ನು ಭೇಟಿ ಮಾಡಲಿದ್ದಾರೆ.