ರಾಹುಲ್ 'ಮಿಠಾಯಿ ಮಗು': ಮೋದಿ
ಹಝಾರಿಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮಿಠಾಯಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ರಾಹುಲ್ ಇನ್ನು 'ಮಗು' ಅದಕ್ಕಾಗಿ 'ಮಿಠಾಯಿ' 'ಬಲೂನು' ಎಂಬ ಪದಗಳನ್ನು ಬಳಸುತ್ತಿದ್ದಾರೆ ಎಂದು ಮಂಗಳವಾರ ಲೇವಡಿ ಮಾಡಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಹುಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿ ಬಿಜೆಪಿ ಪ್ರಮುಖ ನಾಯಕರಾದ ಆಡ್ವಾಣಿ, ಸುಷ್ಮಾ ಸ್ವರಾಜ್, ಯಶವಂತ ಸಿನ್ಹಾ, ಅರುಣ್ ಜೇಟ್ಲಿ, ಮುರುಳಿ ಮನೋಹರ ಜೋಷಿಯಂತಹಾ ನಾಯಕರು ರಾಷ್ಟ್ರದ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರೆ, ರಾಹುಲ್ ಗಾಂಧಿ ಮಕ್ಕಳಂತೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಇಷ್ಟು ದಿನ ಪದೇ ಪದೇ ಬಲೂಲಿನ ವಿಷಯವನ್ನು ಪ್ರಸ್ತಾಪಿಸುತ್ತಿದ್ದ ರಾಹುಲ್ , ಇದೀಗ ಮಿಠಾಯಿಯ ವಿಷಯ ಪ್ರಸ್ತಾಪಿಸಿದ್ದಾರೆ. ಅದರಂತೆ ಮಿಠಾಯಿ, ಬಲೂನಂಥ ಸಿಲ್ಲಿ ವಿಷಯವನ್ನೆಲ್ಲಾ ಗಂಭೀರವಾಗಿ ಮಾತನಾಡಲು ಹಾಗೂ ನಿಮ್ಮ ಮಾತಿಗೆಲ್ಲಾ ಪ್ರತಿಕ್ರಿಯೆ ನೀಡುತ್ತಿರಲು ನಾನೇನು ನಿಮ್ಮ ತರ ಬಲೂಲಿನಲ್ಲಿ ಆಟವಾಡುವ ಮಗುವಲ್ಲ ಎಂದು ಮೋದಿ ಲೇವಡಿ ಮಾಡಿದ್ದಾರೆ.
ಬಲೂಲಿನಲ್ಲಿ ಆಟವಾಡುವ ಮಗುವನ್ನ ದೇಶ ಆಡಳಿತ ನಡೆಸಲು ಆಯ್ಕೆ ಮಾಡಬೇಕೋ ಬೇಡ್ವೋ ಎಂದು ನಿರ್ಧರಿಸುವುದು ಮತದಾರಿಗೆ ಬಿಟ್ಟ ವಿಷಯ ಎಂದು ಸಿಡಿಮಿಡಿಗೊಂಡಿರುವ ಮೋದಿ, ನಾನು ಬಾಲಕನಾಗಿದ್ದಾಗ ಟೀ ಮಾರುತ್ತಿದ್ದೆನಾದರೂ, ಶ್ರೀಮಂತರಂತೆ ಟಾಫಿ (ಮಿಠಾಯಿ) ತಿನ್ನುತ್ತಿರಲಿಲ್ಲವಾದರೂ ನನಗೆ ಟ್ರೋಫಿ (ಯಶಸ್ಸು) ಗಳಿಸಬೇಕೆಂಬ ಕನಸಿತ್ತು ಎಂದು ಹೇಳಿದರು.
ರಾಹುಲ್ ಗಾಂಧಿ, ಟಾಫಿ ಅಂದರೆ ಮಿಠಾಯಿ ಗೊತ್ತಲ್ಲ. 50 ಪೈಸೆ 1 ರೂಪಾಯಿಗೆ ಸಿಗುತ್ತದೆ. ಅದೇ ರೀತಿ ಗುಜರಾತಿನಲ್ಲಿನ ಬಡಪಾಯಿ ರೈತರ ಭೂಮಿಯನ್ನ ನರೇಂದ್ರ ಮೋದಿ ಸರ್ಕಾರ ಉಪಾಯದಿಂದ ಕಡಿಮೆ ಬೆಲೆ (ಮಿಠಾಯಿ ಬೆಲೆ) ಕೊಟ್ಟು ಖರೀದಿಸಿ ಅದನ್ನೇ ಬೃಹತ್ ಕೈಗಾರಿಕೋದ್ಯಮಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ವ್ಯಾಪಾರ ಕುದುರಿಸಿದೆ ಎಂದು ಆರೋಪಿಸಿದ್ದರು.