ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಿ. ಶೇಷಾದ್ರಿ, ಗಿರೀಶ್‌ ಕಾಸರವಳ್ಳಿಗೆ ರಾಷ್ಟ್ರ ಪ್ರಶಸ್ತಿ

61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕರ್ನಾಟಕದ ಪಿ. ಶೇಷಾದ್ರಿ ಹಾಗೂ ಗಿರೀಶ್ ಕಾಸರವಳ್ಳಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

Vishwanath S
Updated On : 16 Apr 2014, 7:41 am

ನವದೆಹಲಿ: 61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕರ್ನಾಟಕದ ಪಿ. ಶೇಷಾದ್ರಿ ಹಾಗೂ ಗಿರೀಶ್ ಕಾಸರವಳ್ಳಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಪಿ. ಶೇಷಾದ್ರಿ ನಿರ್ದೇಶನದ 'ಡಿಸೆಂಬರ್ 1' ಚಿತ್ರಕ್ಕೆ ಅತ್ಯುತ್ತಮ ಮೂಲ ಚಿತ್ರಕತೆಗಾಗಿ (ಒರಿಜಿನಲ್ ಸ್ಕ್ರೀನ್‌ಪ್ಲೇ) ಪಿ. ಶೇಷಾದ್ರಿ ಅವರಿಗೆ ಲಭಿಸಿದೆ. ಹಾಗೂ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಕೂಡ 'ಡಿಸೆಂಬರ್ 1' ಚಿತ್ರಕ್ಕೆ (ರಜತಕಮಲ) ಲಭಿಸಿದೆ.

ಯು.ಆರ್ ಅನಂತಮೂರ್ತಿ ಕುರಿತ ಸಾಕ್ಷ್ಯಚಿತ್ರಕ್ಕಾಗಿ ಗಿರೀಶ್ ಕಾಸರವಳ್ಳಿ ಅವರಿಗೆ ವಿಶೇಷ ಜ್ಯೂರಿ ಪ್ರಶಸ್ತಿ ಲಭಿಸಿದೆ.

ರೂಪಾಂತರಿಸಿದ ಅತ್ಯುತ್ತಮ ಚಿತ್ರಕತೆಗಾಗಿ(ಅಡಾಪ್ಟೆಡ್ ಸ್ಕ್ರೀನ್‌ಪ್ಲೇ) ಪಂಚಾಕ್ಷರಿ ನಿರ್ದೇಶನದ 'ಪ್ರಕೃತಿ' ಚಿತ್ರಕ್ಕಾಗಿ ಪಂಚಾಕ್ಷರಿ ಅವರಿಗೆ ಲಭಿಸಿದೆ. ಅವರು ಯು.ಆರ್ ಅನಂತಮೂರ್ತಿ ಅವರ ಮೂಲಕತೆ ಆಧಾರಿಸಿ ಈ ಚಿತ್ರಕಥೆಯನ್ನು ಬರೆದಿದ್ದರು.

ಉತ್ತಮ ಪ್ರಾದೇಶಿಕ ಚಿತ್ರಗಳ:

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement