ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

5ನೇ ಹಂತ: ರಾಜ್ಯದ 28 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಇಂದು ಏಕಕಾಲದಲ್ಲಿ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆವರೆಗೆ ರಾಜ್ಯಾದ್ಯಂತ ಶೇ. 56 ರಷ್ಟು ಮತದಾನವಾಗಿದೆ.

Vishwanath S
Updated On : 17 Apr 2014, 5:13 am

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಇಂದು ಏಕಕಾಲದಲ್ಲಿ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆವರೆಗೆ ರಾಜ್ಯಾದ್ಯಂತ ಶೇ. 56 ರಷ್ಟು ಮತದಾನವಾಗಿದೆ.

ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮತ ಚಲಾಯಿಸಲು ಮತದಾರರು ಮತಕಟ್ಟೆಗಳ ಬಳಿ ಸಾಲು ಕಟ್ಟಿ ನಿಂತಿರುವುದು ಸಾಮಾನ್ಯವಾಗಿತ್ತು. ಭಾಗಶಃ ಎಲ್ಲಾ ಕಡೆ ಶಾಂತಿಯುತ ಮತದಾನ ನಡೆಯುತ್ತಿದೆ.

2014ರ ಚುನಾವಣೆಯ 9 ಹಂತದ ಮತದಾನದ ಪೈಕಿ ಐದನೇ ಹಂತ ಅತಿ ದೊಡ್ಡ ಹಂತದ ಮತ ಸಮರ ಇದಾಗಿದೆ. ರಾಜ್ಯದಲ್ಲಿ ಘಟಾನುಘಟಿ ನಾಯಕರು ಕಣದಲ್ಲಿದ್ದು, ಮತದಾರ ಪ್ರಭು ಅವರ ಭವಿಷ್ಯ ನಿರ್ಧರಿಸಲಿದ್ದಾರೆ.

ಸಂಜೆ 5 ಗಂಟೆವರೆಗೆ ಶೇಕಡಾವಾರು ಮತದಾನ:
ಶೇಕಡಾವಾರು ಮತದಾನ: ರಾಜ್ಯಾದ್ಯಂತ ಶೇ.56, ಬೆಂಗಳೂರು ದಕ್ಷಿಣ ಶೇ. 40, ಬೆಂಗಳೂರು ಕೇಂದ್ರ ಶೇ.34, ಬೆಂಗಳೂರು ಉತ್ತರ ಶೇ.39, ಬೆಂಗಳೂರು ಗ್ರಾಮಾಂತರ ಶೇ.51, ಕೋಲಾರ ಶೇ.40, ತುಮಕೂರು ಶೇ.42, ಚಿತ್ರದುರ್ಗ ಶೇ.25, ದಾವಣಗೆರೆ ಶೇ.51, ಬಿಜಾಪುರ ಶೇ.42, ರಾಯಚೂರು ಶೇ.38, ಬೆಳಗಾವಿ ಶೇ.49, ಬೀದರ್ ಶೇ.38, ಕೊಪ್ಪಳ ಶೇ.40. ಬಾಗಲಕೋಟೆ ಶೇ.32.5, ಉತ್ತರಕನ್ನಡ ಶೇ.35, ದಕ್ಷಿಣ ಕನ್ನಡ ಶೇ.55, ಹಾವೇರಿ ಶೇ.33, ಉಡುಪಿ ಶೇ.49, ಧಾರವಾಡ ಶೇ.44, ಹಾಸನ ಶೇ.52, ಗುಲ್ಬರ್ಗಾ ಶೇ.43, ಚಿಕ್ಕೋಡಿ ಶೇ.52, ಮೈಸೂರು ಶೇ.52,  ಬಳ್ಳಾರಿ ಶೇ.52, ಚಿಕ್ಕಬಳ್ಳಾಪುರ ಶೇ.45, ಮಂಡ್ಯ ಶೇ.42, ಚಾಮರಾಜನಗರ ಶೇ.48, ಶಿವಮೊಗ್ಗ ಶೇ.42.

ಕಣದಲ್ಲಿರುವ ಪ್ರಮುಖ ನಾಯಕರು
ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ನಿಂದ ನಂದನ್ ನಿಲೇಕಣಿ, ವೀರಪ್ಪ ಮೊಯ್ಲಿ, ಕೆ.ಹೆಚ್ ಮುನಿಯಪ್ಪ ಮಲ್ಲಿಕಾರ್ಜುನ್ ಖರ್ಗೆ ಬಿಜೆಪಿಯಿಂದ ಅನಂತ ಕುಮಾರ್, ಬಿ.ಎಸ್ ಯಡಿಯೂರಪ್ಪ, ಸದಾನಂದಗೌಡ ಕಣದಲ್ಲಿದ್ದಾರೆ.

ಹಕ್ಕು ಚಲಾಯಿಸಿದ ನಾಯಕರು
ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ದು, ಮಾಜಿ ಸಿಎಂಗಳಾದ ಧರಂಸಿಂಗ್, ಬಿ.ಎಸ್ ಯಡಿಯೂರಪ್ಪ, ಸದಾನಂದಗೌಡ, ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಆಯನೂರು ಮಂಜುನಾಥ್, ನ್ಯಾ. ಸಂತೋಷ್ ಹೆಗ್ಡೆ, ಕೇಂದ್ರ ಸಚಿವರಾದ ಕೆ.ಹೆಚ್ ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಮತ ಚಲಾಯಿಸಿದ್ದಾರೆ.  

ಹಕ್ಕು ಚಲಾಯಿಸಿದ ಸಿನಿಮಾ ನಟ ನಟಿಯರು
ನವರಸ ನಾಯಕ ಜಗ್ಗೇಶ್, ಬ್ಲಾಕ್ ಕೋಬ್ರಾ ದುನಿಯ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ನಟಿ ರಮ್ಯಾ, ಭಾವನ ತಮ್ಮ ಹಕ್ಕು ಚಲಾಯಿಸಿದರು.

ಮತದಾನ ಬಹಿಷ್ಕರ

ಯಾವುದೇ ರಾಜಕೀಯ ಪಕ್ಷಗಳು ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿಲ್ಲ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ಗಣೇಶ್ ಕಾಲೋನಿ ಜನರು ಮತದಾನ ಬಹಿಷ್ಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement