ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಉ.ಪ್ರದೇಶದಲ್ಲಿ 11 ಗಂಟೆವರೆಗೆ ಶೇ.27 ಮತದಾನ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ..

Rashmi Kasaragodu
Updated On : 17 Apr 2014, 3:55 am

ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಬೆಳಗ್ಗೆ 11 ಗಂಟೆಯ ವೇಳೆಗೆ ಶೇ. 27.44 ಮತದಾನ ನಡೆದಿರುವುದಾಗಿ ವರದಿಯಾಗಿದೆ.

ಚುನಾವಣಾ ಆಯೋಗದ ಮೂಲಗಳ ಪ್ರಕಾರ ನಗೀನಾದಲ್ಲಿ ಶೇ. 28.25 ಮತದಾನ ಆಗಿದ್ದು, ಮೊರಾದಾಬಾದ್ನಲ್ಲಿ ಶೇ.24 ಹಾಗು ರಾಂಪುರದಲ್ಲಿ ಶೇ.28.84 ಮತದಾನ ಆಗಿದೆ.

ಅದೇ ವೇಳೆ ಸಂಭಾಲ್ನಲ್ಲಿ ಶೇ. 25, ಅಮೋರಾದಲ್ಲಿ ಶೇ. 26.20, ಬಾಧುನ್ನಲ್ಲಿ ಶೇ.24.4, ಅನೋಲಾದಲ್ಲಿ ಶೇ. 24.4, ಬರೇಲಿಯಲ್ಲಿ ಶೇ. 26.6 , ಪಿಲಿಬಿಟ್ನಲ್ಲಿ ಶೇ. 23.60, ಶಹಜಾನ್ಪುರದಲ್ಲಿ ಶೇ.21.83 ಮತ್ತು ಖೇರಿಯಲ್ಲಿ  ಶೇ 24.4 ಮತದಾನ ನಡೆದಿದೆ.

ಈ ಹಂತದ ಚುನಾವಣೆಯಲ್ಲಿ ಮೊರಾದಾಬಾದ್, ರಾಂಪುರ್, ಸಂಭಾಲ್, ಅಮ್ರೋಹಾ, ಬಾದುನ್, ಬರೇಲಿ, ಪಿಲಿಬಿಟ್, ಶಹಜಾನ್ಪುರ್, ನಗೀನಾ, ಅನೋಲಾ ಮತ್ತು ಖೇರಿ ಲೋಕಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

ಉತ್ತರ ಪ್ರದೇಶದಲ್ಲಿ ಮೇನಕಾ ಗಾಂಧಿ, ಸಂತೋಷ್ ಗಾಂಗ್ವರ್, ಸಲೀಂ ಶೇರ್ವಾನಿ ಮತ್ತು ಬೇಗಂ ನೂರ್ ಬನೋ ಮೊದಲಾದ ಘಟಾನುಘಟಿಗಳು ಇಲ್ಲಿ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement