ಉಮಾ ಭಾರತಿ ಮೋದಿ 'ವಿನಾಶ ಪುರುಷ' ಎಂದಿದ್ದ ಸಿಡಿ ಬಿಡುಗಡೆ
ಬಿಜೆಪಿ ನಾಯಕಿ ಉಮಾ ಭಾರತಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 'ವಿಕಾಸ ಪುರುಷ
ಲಖನೌ: ಬಿಜೆಪಿ ನಾಯಕಿ ಉಮಾ ಭಾರತಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 'ವಿಕಾಸ ಪುರುಷ ಅಲ್ಲ ವಿನಾಶ ಪುರುಷ' ಎಂದು ಹೇಳಿದ್ದ ವಿಡಿಯೋ ಸಿಡಿಯನ್ನು ಕಾಂಗ್ರೆಸ್ ಗುರುವಾರ ಬಿಡುಗಡೆ ಮಾಡಿದೆ. ಅಲ್ಲದೆ ಇದು ಮೋದಿಯ ನಿಜವಾದ ಮುಖ ಎಂದು ಹೇಳಿದೆ.
ಉತ್ತರ ಪ್ರದೇಶದ ಝಾನ್ಸಿಯ ಬಿಜೆಪಿ ಅಭ್ಯರ್ಥಿ ಉಮಾ ಭಾರತಿ ಅವರು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ವಿರುದ್ಧ ಮಾತನಾಡಿರುವುದು ಇದೇ ಮೊದಲೇನಲ್ಲ. ಈ ಮುಂಚೆಯೂ ಮೋದಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗಿಂತ ಉತ್ತಮ ವಾಗ್ಮಿ ಅಲ್ಲ ಎಂದಿದ್ದ ವಿಡಿಯೋವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿತ್ತು.
ಉಮಾ ಭಾರತಿ ಅವರು 2006ರಲ್ಲಿ ಬಿಜೆಪಿ ತೊರೆದು ಭಾರತೀಯ ಜನಶಕ್ತಿ ಪಕ್ಷ ಸ್ಥಾಪಿಸಿದ ವೇಳೆ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಅದನ್ನು ಇಂದು ಕಾಂಗ್ರೆಸ್ ಬಿಡುಗಡೆ ಮಾಡಿದೆ. 2011ರಲ್ಲಿ ಉಮಾ ಭಾರತಿ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದರು.