ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ನಾಪತ್ತೆ
ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಕೋಟೆ ಎಂ.ಶಿವಣ್ಣ ಅವರು ಕಳೆದ ಎರಡು..
ಚಾಮರಾಜನಗರ: ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ ಕೋಟೆ ಎಂ.ಶಿವಣ್ಣ ಅವರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಜೆಡಿಎಸ್ ಕಾರ್ಯಕರ್ತರು ತೀವ್ರ ಗೊಂದಲಕ್ಕೆ ಸಿಲುಕಿದ್ದಾರೆ.
ಅಭ್ಯರ್ಥಿಗಳ ಪಾಲಿಗೆ ಮತದಾನ ನಡೆಯುವ ದಿನ ಹಾಗೂ ಅದರ ಹಿಂದಿನ ದಿನ ಬಹಳ ಮುಖ್ಯ. ಆದರೆ ಕಳೆದ ಎರಡು ದಿನಗಳ ಶಿವಣ್ಣ ನಾಪತ್ತೆಯಾಗಿದ್ದು, ಜೆಡಿಎಸ್ ಮುಖಂಡರ ದೂರುವಾಣಿ ಕರೆ ಸಹ ಸ್ವೀಕರಿಸುತ್ತಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಮಧ್ಯೆ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಒಳ ಒಪ್ಪಂದವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಧ್ರುವ ನಾರಾಯಣ್ ಅವರು ಆರೋಪಿಸಿದ್ದರು.