ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಆಯೋಗ ಕ್ರಮ
ಬೆಂಗಳೂರು: ಕೋಲಾರದ ಹಾರೋಹಳ್ಳಿಯಲ್ಲಿ ಮತಯಂತ್ರದ ದಿಕ್ಕು ಬದಲಾವಣೆಗೆ ಅವಕಾಶ ಮಾಡಿಕೊಟ್ಟ ಚುನಾವಣಾಧಿಕಾರಿ ಮಂಜುಳ ಎಂಬುವರನ್ನು ಚುನಾವಣಾ ಆಯೋಗ ಬದಲಾವಣೆ ಮಾಡಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಮತದಾನ ನಡೆಯುತ್ತಿದ್ದು, ಇಂದು ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಮತದಾನ ಮಾಡುವ ವೇಳೆ ವಾಸ್ತು ದೋಷ ನೀಡಿ ಮತಯಂತ್ರವನ್ನು ಪೂರ್ವಕ್ಕೆ ಬದಲಾಯಿಸಿದ್ದರು.
ಈ ವೇಳೆ 230ನೇ ಮತಗಟ್ಟೆಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುಳಾ ಎಂಬುವರು ಮತಯಂತ್ರದ ದಿಕ್ಕು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ ಮಂಜುಳರ ಸ್ಥಾನಕ್ಕೆ ಮಂಜುನಾಥ್‌ರನ್ನು ಬದಲಾಸಿದ್ದಾರೆ.
ಚುನಾವಣಾ ಆಯೋಗದ ನೀತಿ ಸಂಹಿತೆಯಡಿ ಮತಯಂತ್ರ ಬದಲಾವಣೆಗೆ ಅವಕಾಶವಿಲ್ಲ ಆದರೂ ಇದಕ್ಕೆ ಅವಕಾಶ ಮಾಡಿಕೊಟ್ಟ ಮಂಜುಳ ವಿರುದ್ಧ ಆಯೋಗ ಕ್ರಮಕೈಗೊಂಡಿದೆ.