ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಿಯಾಂಕಾ ಆಪ್ತರಿಂದ ಕೊಲೆ ಬೆದರಿಕೆ: ಕುಮಾರ್ ವಿಶ್ವಾಸ್ ಆರೋಪ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಹೋದರಿ...

Rashmi Kasaragodu
Updated On : 17 Apr 2014, 4:12 am

ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿಯವರ ಆಪ್ತರೊಬ್ಬರು ತಮಗೆ ಕೊಲೆ ಬೆದರಿಕೆಯನ್ನೊಡ್ಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ. ಕುಮಾರ್ ವಿಶ್ವಾಸ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಕುಮಾರ್ ವಿಶ್ವಾಸ್ ತಮ್ಮ ಆರೋಪವನ್ನು ಪುಷ್ಠೀಕರಿಸಲು ವೀಡಿಯೋ ಕೂಡಾ ಟ್ವೀಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

Rahul-Priyanka close aide threatens to KILL me. Priyanka invites him to guest house to discuss! https://www.youtube.com/watch?v=8wJVXmI9Ebs … #KillerCongress? ಎಂದು ಡಾ. ಕುಮಾರ್ ವಿಶ್ವಾಸ್ ಟ್ವೀಟ್ ಮಾಡಿದ್ದು, ಸುದ್ದಿಗೆ ಗ್ರಾಸವಾಗಿದೆ.

ಪ್ರಸ್ತುತ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಪ್ರಿಯಾಂಕಾ ಅವರ ಕಾರು ಬಳಿ ಬಂದು ತಾನು ಕುಮಾರ್ ವಿಶ್ವಾಸ್ ಅವರನ್ನು ಶೂಟ್ ಮಾಡುತ್ತೇನೆ ಎಂದು ಹೇಳುತ್ತಿರುವಂತೆ ಕಾಣುತ್ತದೆ. ಆದರೆ ಪ್ರಿಯಾಂಕಾ ಗಾಂಧಿ, ಆ ವ್ಯಕ್ತಿ ಅಂಥದ್ದೇನೂ ಹೇಳಿಲ್ಲ, ಅವರು ಮಾತುಕತೆಗಾಗಿ ನಮ್ಮನ್ನು ಅತಿಥಿಗೃಹಕ್ಕೆ ಕರೆದಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಮೇಠಿಯಲ್ಲಿ ಕುಮಾರ್ ವಿಶ್ವಾಸ್ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿದ್ದು, ಬಿಜೆಪಿಯ ಸ್ಮೃತಿ ಇರಾನಿ ಕೂಡಾ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement